ನ್ಯೂಸ್ ನಾಟೌಟ್: ರಾಜಕೀಯ ಬಣ ಬಡಿದಾಟಗಳ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ದೇವರ ಮೊರೆ ಹೋಗಿದ್ದಾರೆ. ತಮಿಳುನಾಡಿನ ಕುಂಬಕೋಣಂಗೆ ಭೇಟಿ ನೀಡಿದ್ದ ಅವರಿಂದು, ಶಕ್ತಿ ಸ್ವರೂಪಿಣಿ, ಉಗ್ರ ಸ್ವರೂಪಿಣಿ ಎಂದೇ ಹೆಸರಾಗಿರುವ ಪ್ರತ್ಯಂಗಿರಾ ದೇವಿ ದರ್ಶನ ಪಡೆದಿದ್ದಾರೆ. ಡಿಕೆಶಿ ಈ ಭೇಟಿಯು ಕುತೂಹಲದೊಂದಿಗೆ ಭಾರೀ ಚರ್ಚೆಗೆ ಕಾರಣವಾಗಿದೆ.
ರಾಜಕೀಯ ಸಮಸ್ಯೆ ಪರಿಹಾರಕ್ಕಾಗಿ ದೇವಿ ದರ್ಶನ ಪಡೆದರೇ ಎಂಬ ಪ್ರಶ್ನೆಯೂ ಎದ್ದಿದೆ. ಪ್ರತ್ಯಂಗಿರಾ ದೇವಿಯು ಶಕ್ತಿ ದೇವತೆಗಳಲ್ಲಿ ಉಗ್ರ ಸ್ವರೂಪಿಣಿ, ಶತ್ರು ಸಂಹಾರಕ್ಕಾಗಿ ಜನಿಸಿ ಬಂದವಳು ಈಕೆ. ಶಿವ-ವಿಷ್ಣು ಹಾಗೂ ಆದಿಶಕ್ತಿ ಈ ಮೂವರ ಅಂಶವನ್ನು ಹೊಂದಿರುವ ದೇವತೆ ಎಂಬ ನಂಬಿಕೆಯಿದೆ. ಈ ಪ್ರತ್ಯಂಗಿರಾ ದೇವಿಯು ಸಿಂಹದ ಮುಖ ಸ್ತ್ರೀಯ ದೇಹ ಹೊಂದಿದ್ದು ಸಿಂಹವನ್ನೇ ವಾಹನವಾಗಿ ಮಾಡಿಕೊಂಡಿದ್ದಾಳೆ.
ಗೃಹ ಸಚಿವ ಪರಮೇಶ್ವರ್ ಆಯೋಜಿಸಿದ್ದ ಡಿನ್ನರ್ ಸಭೆಗೆ ಬ್ರೇಕ್ ಹಾಕಿದ ಬಳಿಕ ಕಾಂಗ್ರೆಸ್ ಭಿನ್ನಮತ ತಾರಕಕ್ಕೆರಿದೆ. ಡಿನ್ನರ್ ಪಾಲಿಟಿಕ್ಸ್ ಮಾಡಿದ್ದ ಸಿಎಂ ಬಣಕ್ಕೆ, ವಿದೇಶದಿಂದ ವಾಪಸ್ ಆಗುತ್ತಲೇ ಹೈಕಮಾಂಡ್ ಮೂಲಕ ಸೈಲೆಂಟಾಗಿ ಶಾಕ್ ನೀಡುವ ಕೆಲಸವನ್ನ ಡಿಸಿಎಂ ಡಿಕೆ ಶಿವಕುಮಾರ್ ಮಾಡಿದ್ದರು. ಈಗ ಡಿನ್ನರ್ಗೆ ಬ್ರೇಕ್ ಹಾಕಿದ್ದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಬಣ ಕೆರಳಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಜ.13 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಡಿಕೆಶಿ ಶಕ್ತಿ ಸ್ವರೂಪಿಣಿ ದೇವಿಯ ಮೊರೆ ಹೋಗಿದ್ದಾರೆ.
Click