ನ್ಯೂಸ್ ನಾಟೌಟ್ : ಸುಳ್ಯದಿಂದ ಕಾಸರಗೋಡಿಗೆ ಸಂಚರಿಸುತ್ತಿದ ಬೈ ಹುಲ್ಲು ತುಂಬಿದ್ದ ಲಾರಿ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಘಟನೆ ಇಂದು(ಜ.8) ನಡೆದಿದೆ.
ಘಟನೆ ಜಾಲ್ಸೂರಿನಿಂದ ಕಾಸರಗೋಡಿಗೆ ತೆರಳುವ ಮಾರ್ಗ ಮಧ್ಯೆ ‘ಪರಪ್ಪ’ ಎಂಬಲ್ಲಿ ನಡೆದಿದೆ. ಎರಡೂ ವಾಹನ ಜಖಂ ಆಗಿದ್ದು. ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳೀಯರ ಪ್ರಕಾರ ಬೈಹುಲ್ಲಿನ ವಾಹನ ಚಾಲಕನ ಅಜಾಗರೂಕತೆ ಘಟನೆಗೆ ಕಾರಣ ಎನ್ನಲಾಗಿದೆ.