ನ್ಯೂಸ್ ನಾಟೌಟ್: ಹೊಸ ವರ್ಷ 2025 ಅನ್ನು ಎಲ್ಲರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಹಾಗೆ ಸ್ವಾಗತಿಸಲು ಗುಡ್ಡೆ ಹತ್ತಿದ ಯುವಕರನ್ನು ಭಾಗಮಂಡಲದ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ಸುಳ್ಯ, ಪೆರಾಜೆ, ಅರಂತೋಡಿನ ಯುವಕರು ಹೊಸ ವರ್ಷಕ್ಕೆ ಮೋಜು- ಮಸ್ತಿ ಮಾಡುವುದಕ್ಕಾಗಿ ತೊಡಿಕಾನ ಸಮೀಪದ ಭಾಗಮಂಡಲ ರೇಂಜ್ ನ ಕೋಳಿಕಲ್ಲು ಮಲೆ ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ.
ಈ ವಿಷಯ ತಿಳಿದ ಅರಣ್ಯ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಅವರನ್ನು ಬಿಡಿಸಲು ಕೆಲವು ಮುಖಂಡರು ಅಲ್ಲಿಗೆ ತೆರಳಿದ್ದಾರೆಂದು ತಿಳಿದು ಬಂದಿದೆ.