- +91 73497 60202
- [email protected]
- January 10, 2025 9:33 AM
ಸುಳ್ಯ: ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟ ಪ್ರಕರಣಕ್ಕೆ ಶಿಕ್ಷೆ ಪ್ರಕಟ..! ತಾಯಿಯನ್ನು ದೋಷಿ ಎಂದ ನ್ಯಾಯಾಲಯ..!
ನ್ಯೂಸ್ ನಾಟೌಟ್ : ತಾಯಿಯೊಬ್ಬಳು ತನ್ನ 5 ವರ್ಷ ಪ್ರಾಯದ ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟು ಗಾಯಗೊಳಿಸಿದ ಪ್ರಕರಣದ ವಿಚಾರಣೆ ನಿನ್ನೆ(ಜ.8) ನ್ಯಾಯಾಲಯದಲ್ಲಿ ನಡೆದು, ಆರೋಪ ಸಾಬೀತಾಗಿದ್ದು ಆರೋಪಿ ತಾಯಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಕಾವ್ಯಶ್ರಿ ಎಂಬವರು 2022ರ ಆ.16ರಂದು ಸುಳ್ಯದ ಗಾಂಧಿನಗರ ನಾವೂರು ಎಂಬಲ್ಲಿರುವ ತನ್ನ ತಾಯಿಯ ಮನೆಯಲ್ಲಿ ತನ್ನ ವೈಯುಕ್ತಿಕ ವಿಚಾರವಾಗಿ ಹಾಲು ಬಿಸಿ ಮಾಡುವ ಪಾತ್ರೆಯನ್ನು ಗ್ಯಾಸ್ ಸ್ಟವ್ ನಿಂದ ಬಿಸಿ ಮಾಡಿ 5 ವರ್ಷ ಪ್ರಾಯದ ತನ್ನ ಮಗಳ ಎಡ ಕೆನ್ನೆಗೆ, ಬಲ ಕೈ ತೋಳಿಗೆ, ಎಡ ಕೈ ಭುಜಕ್ಕೆ, ಎಡ ಕಾಲಿನ ತೊಡೆಗೆ ಸುಟ್ಟು ನೋವುಂಟು ಮಾಡಿ ಗಾಯ ಮಾಡಿದ್ದರು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ತಾಯಿ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಆಗಿ ಅಪರಾಧ ಎಸಗಿರುವುದು ಸಾಬಿತಾಗಿದ್ದು, ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಬಿ.ಮೋಹನ್ ಬಾಬು ಆಪಾದಿತೆಯನ್ನು ದೋಷಿ ಎಂದು ತೀರ್ಪು ನೀಡಿ 5000 ರೂ. ದಂಡ ತಪ್ಪಿದ್ದಲ್ಲಿ 1 ತಿಂಗಳ ಸಾದಾ ಕಾರಾಗೃಹ ಶಿಕ್ಷೆಯನ್ನಾಗಿ ತೀರ್ಪು ನೀಡಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ