ನ್ಯೂಸ್ ನಾಟೌಟ್: ಸುಳ್ಯದ ಮುಖ್ಯ ಪೇಟೆಗಳಲ್ಲಿ ಪ್ರತಿ ನಿತ್ಯವೂ ಒಂದೊಂದು ಅವಘಡಗಳ ಬಗ್ಗೆ ವರದಿಯಾಗುತ್ತಲೇ ಇದೆ. ಇದೀಗ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯದ ಮುಖ್ಯ ಪೇಟೆಯ ಕುಂ ಕುಂ ಇಂಟರ್ ನ್ಯಾಷನಲ್ ಬಟ್ಟೆ ಮಳಿಗೆಯ ಸಮೀಪದ ಅಣತಿ ದೂರದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.
ನಿಂತಿದ್ದ ಕಾರಿಗೆ ಕೆಎಸ್ ಆರ್ ಟಿಸಿ ಬಸ್ ವೊಂದು ಒರೆಸಿಕೊಂಡು ಹೋಗಿದೆ. ಪರಿಣಾಮ ಕಾರು ಜಖಂಗೊಂಡಿದೆ. ರಸ್ತೆ ಸಣ್ಣದಾಗಿದ್ದು ಘನ ವಾಹನಗಳ ಸಂಚಾರಕ್ಕೆ ಕಷ್ಟವಾಗುತ್ತಿದೆ. ಅದರಲ್ಲೂ ಬೆಳಗ್ಗೆ , ಸಂಜೆ, ರಾತ್ರಿಯ ಸಮಯದಲ್ಲಿ ವಾಹನ ಎಷ್ಟು ಎಚ್ಚರಿಕೆಯಿಂದ ಓಡಿಸಿದರೂ ಸಾಲುವುದಿಲ್ಲ. ಎದುರಿಗೆ ಎರಡು ರಿಕ್ಷಾ ಬಂದರೂ ಸೈಡ್ ಕೊಟ್ಟುಕೊಂಡು ಹೋಗುವುದಕ್ಕೆ ಕಷ್ಟವಾಗುತ್ತಿದೆ. ಅಲ್ಲದೆ ಕೆಲವರು ಅಲ್ಲಲ್ಲಿ ವಾಹನಗಳ ಪಾರ್ಕಿಂಗ್ ಮಾಡುತ್ತಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಮೊದಲೇ ರಸ್ತೆ ಸಣ್ಣದು ಅದರಲ್ಲೂ ಅಲ್ಲಲ್ಲಿ ವಾಹನ ನಿಲ್ಲಿಸಿ ಹೋಗುವುದರಿಂದ ಇಡೀ ರಸ್ತೆಯೇ ಬ್ಲಾಕ್ ಆಗುತ್ತಿದೆ. ನಮ್ಮ ಪೊಲೀಸರು ಕೆಲವು ಸಲ ಕಣ್ಣಿದ್ದೂ ಕುರುಡರಂತಾಗಿರುವುದರಿಂದ ರಸ್ತೆ ವಾಹನ ನಿಲ್ಲಿಸುವ ಜಾಗ ಎಲ್ಲವೂ ಒಂದೇ ಆಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.