ನ್ಯೂಸ್ ನಾಟೌಟ್: ಡಾ ಕುರುಂಜಿ ಚಿದಾನಂದ ಗೌಡ ಮತ್ತು ಮನೆಯವರಿಂದ ನೂತನ ಬ್ರಹ್ಮರಥದ ಸಮರ್ಪಣೆ, ಭೂಸ್ಪರ್ಶ ಮಹೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ (ಜ.2) ಗುರುವಾರದಂದು ಶ್ರೀ ಚೆನ್ನಕೇಶವ ದೇವರ ಸಾನಿಧ್ಯದಲ್ಲಿ ನಡೆಯಿತು.
ಬೆಳಿಗ್ಗೆ 9.11ರ ಶುಭ ಗಳಿಗೆಯಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಆರೋತ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಡಾ ಕೆ.ವಿ ಚಿದಾನಂದ ಮತ್ತು ಮನೆಯವರು ನೂತನ ಬ್ರಹ್ಮರಥವನ್ನು ಎಳೆಯುವುದರ ಮೂಲಕ ನೂತನ ಬ್ರಹ್ಮರಥದ ಭೂಸ್ಪರ್ಶ ಮಹೋತ್ಸವ ಕಾರ್ಯಕ್ರಮ ನೆರವೇರಿತು. ಬಳಿಕ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆಯನ್ನು ಮಾಜಿ ವಿಧಾನ ಸಭಾ ಸದಸ್ಯರಾದ ಕೆ.ಜಿ ಬೋಪಯ್ಯ ವಹಿಸಿ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯ ಮಂತ್ರಿಗಳಾದ ಡಿ.ವಿ ಸದಾನಂದ ಗೌಡ ದೀಪ ಬೆಳಗುವುದರ ಮೂಲಕ ಉದ್ಘಾ ಟಿಸಿದರು. ಬಳಿಕ ಮಾತನಾಡಿದ ಡಿ.ವಿ.ಎಸ್” ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಹುಟ್ಟು ಸಾವಿನ ಮಧ್ಯೆ ಒಬ್ಬ ವ್ಯಕ್ತಿ ಸಮಾಜಕ್ಕೆ ಶಕ್ತಿಯಾಗಿ ಪರಿವರ್ತನೆಗೊಂಡು ಸಮಾಜದಲ್ಲಿ ಶಕ್ತಿವಂತನಾಗಿ ಬೆಳೆಯಲು ದೇವರ ಆಶೀರ್ವಾದವಿರಬೇಕು. ಈ ಸಮಾಜದಲ್ಲಿ ವ್ಯಕ್ತಿಯಾಗಿ ಶಕ್ತಿಯಾಗಿ ಮೂಡಿ ಬಂದು ಸುಳ್ಯದ ಮಣ್ಣಿಗೆ ಶಕ್ತಿ ತುಂಬಿ ಕೊಡುಗೆಯನ್ನು ನೀಡಿದವರು ಡಾ ಕುರುಂಜಿ ವೆಂಕಟರಮಣ ಗೌಡರು” ಎಂದು ಅಭಿನಂದಿಸಿದ್ದಾರೆ.
ಒಡಿಯೂರು ಕ್ಷೇತ್ರ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ಮಾಮೀಜಿಯವರು ಆಶೀರ್ವಚನ ನೀಡಿ ಮಾತನಾಡಿ,” ಬ್ರಹ್ಮ ರಥ ಸಮರ್ಪಣೆಯ ಈ ದಿನ ಬಂಗಾರದ ಅಕ್ಷರದಲ್ಲಿ ಬರೆದಿಡಬೇಕಾದ ದಿನ. ಇಂತಹ ಅವಿಸ್ಮರಣಿಯ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ನಮ್ಮಲ್ಲಿರುವ ಸಂಪತ್ತಿನ ಒಂದಷ್ಟು ಭಾಗವನ್ನು ಧಾನ ಮಾಡಿದಾಗ ಪುಣ್ಯ ಸಂಚಯನವಾಗುವುದು. ನೂತನ ಬ್ರಹ್ಮರಥವನ್ನು ಸಮರ್ಪಿಸುವ ಮೂಲಕ ಡಾ ಕೆ.ವಿ ಚಿದಾನಂದ ದಂಪತಿಗಳು ಅಧ್ಬುತ ಕೆಲಸವನ್ನು ಮಾಡಿದ್ದಾರೆ. ಈ ಮೂಲಕ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಎಂದು ಆಶಿರ್ವದಿಸಿದ್ದಾರೆ.
ಈ ಸಂದರ್ಭ ವೇದಿಕೆಯಲ್ಲಿ ಡಾ. ಕುರುಂಜಿ ಚಿದಾನಂದ ಗೌಡ ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಶ್ರೀ ಚೆನ್ನಕೇಶವ ದೇವಸ್ಥಾನ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ ಸಿ, ಉಪಾಧ್ಯಕ್ಷೆ ಶೋಭಾ ಚಿದಾನಂದ, ಡಾ ಐಶ್ವರ್ಯ ಕೆ.ಸಿ, ಡಾ ಗೌತಮ್ ಗೌಡ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ ಹರಪ್ರಸಾದ್ ತುದಿಯಡ್ಕ, ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಅರಿಕೋಡಿಯ ಧರ್ಮದರ್ಶಿ ಹರೀಶ್ ಆರಿಕೋಡಿ , ಮಾಜಿ ಸಚಿವರಾದ ರಮಾನಾಥ ರೈ, ಮಾಜಿ ಸಚಿವರಾದ ಎಸ್ ಅಂಗಾರ, ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದರು ನಳಿನ್ ಕುಮಾರ್ ಕಟೀಲ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಆಕಾಡೆಮಿಯ ಆದ್ಯಕ್ಷರು ಸದಾನಂದ ಮಾವಜಿ, ಸುಳ್ಯ ಲ.ಎಂ.ಬಿ. ಸದಾಶಿವ ಮಾಜಿ ಲಯನ್ಸ್ ರಾಜ್ಯಪಾಲರು, ಸುಳ್ಯ ತಾಲೂಕಿನ ತಹಶಿಲ್ದಾರರು ಮಂಜುಳಾ, ಸುಳ್ಯ ನಗರ ಪಂಚಾಯತ್ ಸದಸ್ಯರು ಕಿಶೋರಿ ಶೇಟ್, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಕೇರ್ಪಳ ಲಿಂಗಪ್ಪ ಗೌಡ, ಎನ್ ಜಯಪ್ರಕಾಶ್ ರೈ, ಎಂ.ಮೀನಾಕ್ಷಿ ಗೌಡ, ಬ್ರಹ್ಮ ರಥ ಸಮರ್ಮಣಾ ಸಮಿತಿಯ ಗೌರವಾಧ್ಯಕ್ಷರಾದ ಕೃಷ್ಣ ಕಾಮತ್ ಅರಂಬೂರು, ಅಧ್ಯಕ್ಷರಾದ ನಾರಾಯಣ ಕೇಕಡ್ಕ, ಕಾರ್ಯದರ್ಶಿಗಳಾದ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ವಿ ಹೇಮನಾಥ ಹಾಗೂ ಡಾ ಲೀಲಾಧರ್ ಡಿ.ವಿ ಹಾಗೂ ಎಲ್ಲಾ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆ.ವಿ ಚಿದಾನಂದ ದಂಪತಿಗಳು ಹಾಗೂ ರಥ ಶಿಲ್ಪಿ ರಾಜಗೋಪಾಲ ಆಚಾರ್ಯರನ್ನು ಸನ್ಮಾನಿಸಲಾಯಿತು.
ಕೆ.ಆರ್ ಗೋಪಾಲಕೃಷ್ಣ ಪ್ರಾರ್ಥಿಸಿದರು, ನಾರಾಯಣ ಕೇಕಡ್ಕ ಸ್ವಾಗತಿಸಿದರು. ಲಯನ್ಸ್ ಕ್ಲಬ್ ನ ಮಾಜಿ ಗವರ್ನರ್ ಎಂ.ಬಿ ಸದಾಶಿವ ಅಭಿನಂದನಾ ಭಾಷಣ ಮಾಡಿದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ ಸನ್ಮಾನ ಪತ್ರ ವಾಚಿಸಿದರು. ಚಂದ್ರಶೆಖರ ಪೇರಾಲು ಅಭಿನಂದನಾ ಪತ್ರ ವಾಚಿಸಿದರು. ಡಾ ಲೀಲಾಧರ್ ಡಿ.ವಿ ವಂದಿಸಿದರು. ಬೇಬಿ ವಿದ್ಯಾ ಪಿ.ಬಿ ಹಾಗೂ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.
Click