ನ್ಯೂಸ್ ನಾಟೌಟ್: ಐಒಎಸ್ 18 ಸಾಫ್ಟ್ ವೇರ್ ಅಪ್ ಡೇಟ್ ನಂತರ ಐಫೋನ್ ಗಳಲ್ಲಿ ತಾಂತ್ರಿಕ ಸಮಸ್ಯೆಗಳ ಕುರಿತು ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ) ʼAppleʼ ಗೆ ನೋಟಿಸ್ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಗುರುವಾರ(ಜ.23) ಹೇಳಿದ್ದಾರೆ.
ಈ ಕುರಿತ ಸಮಸ್ಯೆಗಳನ್ನು ಪರಿಶೀಲಿಸಿದ ನಂತರ Appleಗೆ ಗ್ರಾಹಕ ರಕ್ಷಣಾ ಪ್ರಾಧಿಕಾರ ನೋಟಿಸ್ ನೀಡಿದೆ. ಐಫೋನ್ ಗಳಲ್ಲಿ ಸಾಫ್ಟ್ ವೇರ್ ನವೀಕರಣದ ನಂತರ ವರದಿಯಾದ ತಾಂತ್ರಿಕ ಸಮಸ್ಯೆಗಳ ಕುರಿತು Appleನಿಂದ ವಿವರಣೆಯನ್ನು ಕೇಳಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಐಒಎಸ್ 18 ಸಾಫ್ಟ್ ವೇರ್ ಅಪ್ ಡೇಟ್ ನಂತರ ಐಫೋನ್ ಗಳಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿರುವ ಕುರಿತು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಹಲವು ದೂರುಗಳನ್ನು ಕೂಡ ಸ್ವೀಕರಿಸಿದೆ ಎಂದು ವರದಿಯಾಗಿದೆ.
ಐಫೋನ್ ಗಳು ಸೇರಿದಂತೆ Apple ಉತ್ಪನ್ನಗಳಲ್ಲಿನ ಲೋಪದೋಷಗಳ ಬಗ್ಗೆ ಈ ಹಿಂದೆ ಕೇಂದ್ರ ಸರಕಾರ ಎಚ್ಚರಿಕೆ ನೀಡಿತ್ತು. ಇದು ಸೂಕ್ಷ್ಮ ಮಾಹಿತಿ ಸೋರಿಕೆಗೆ ಕಾರಣವಾಗಬಹುದು ಎಂದು ಹೇಳಿತ್ತು ಎನ್ನಲಾಗಿದೆ.
Click