ನ್ಯೂಸ್ ನಾಟೌಟ್: ಆದರ್ಶ ಫ್ರೆಂಡ್ಸ್ ಕ್ಲಬ್ ಚಡಾವು ಕೊಡಗು ಸಂಪಾಜೆ ವತಿಯಿಂದ ಬಾಲಚಂದ್ರ ಕಳಗಿ ಸ್ಮರಣಾರ್ಥ 3ನೇ ವರ್ಷದ ಗ್ರಾಮೋತ್ಸವ ಕಾರ್ಯಕ್ರಮವನ್ನು ಕೊಡಗು ಸಂಪಾಜೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜನವರಿ 5ಕ್ಕೆ ಹಮ್ಮಿಕೊಳ್ಳಲಾಗಿದೆ.
ವಿವಿಧ ವಯೋಮಿತಿಯವರಿಗಾಗಿ ಕ್ರೀಡಾಕೂಟ, ಸ್ಥಳೀಯ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಗಮಯೂರಿ ಅಕಾಡೆಮಿ ಎನ್ ಆರ್ ಪುರ ಚಿಕ್ಕಮಗಳೂರು ಇಲ್ಲಿನ ನಿರ್ದೇಶಕಿ ವಿದುಷಿ ಅಂಕಿತಾ ಪ್ರಜ್ವಲ್ ಇವರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.