ನ್ಯೂಸ್ ನಾಟೌಟ್: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆದಿದ್ದು, ಬಳಿಕ ಚೇತರಿಕೆ ಆಗಿ ಮನೆಗೆ ಮರಳಿದ್ದಾರೆ. ಹಲ್ಲೆಯಾದ ಕೂಡಲೇ ಅವರನ್ನು ಬಾಂದ್ರಾದಿಂದ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಅವರ ಬೆನ್ನುಮೂಳೆಯಲ್ಲಿ ಮುರಿದ ಚಾಕುವಿನ ಭಾಗವನ್ನು ಹೊರತೆಗೆದರು. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಐದು ದಿನಗಳ ನಂತರ ಸೈಫ್ ಆಸ್ಪತ್ರೆಯಿಂದ ಬಿಡುಗಡೆಯಾದರು. ಸುಮಾರು ಒಂದು ವಾರದ ಸೈಫ್ ಅಲಿ ಖಾನ್ ಚಿಕಿತ್ಸಾ ವೆಚ್ಚ ₹36 ಲಕ್ಷ ಎಂದು ವರದಿಯಾಗಿದೆ. ಸೈಫ್ ಅಲಿ ಖಾನ್ ₹35.95 ಲಕ್ಷ ಆರೋಗ್ಯ ವಿಮಾ ಕ್ಲೇಮ್ ಮಾಡಿದ್ದಾರೆ ಎಂದು ಪ್ರಮುಖ ಆರೋಗ್ಯ ವಿಮಾ ಕಂಪನಿ ನಿವಾ ಬುಪಾ ತಿಳಿಸಿದೆ.
ಕ್ಲೇಮ್ ಮಾಡಿದ್ದರಲ್ಲಿ ₹25 ಲಕ್ಷವನ್ನು ಅನುಮೋದಿಸಲಾಗಿದೆ ಎಂದು ತಿಳಿಸಿದೆ. ಸಂಪೂರ್ಣ ಚಿಕಿತ್ಸೆಯ ನಂತರ ಅಂತಿಮ ಬಿಲ್ ಗಳನ್ನು ಸಲ್ಲಿಸಿದ ನಂತರ ಉಳಿದ ಮೊತ್ತವನ್ನು ಪಾವತಿಸಲಾಗುವುದು ಎಂದು ನಿವಾ ಬುಪಾ ಹೇಳಿದೆ. ಸೈಫ್ ಆರೋಗ್ಯ ವಿಮಾ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. ಚಿಕಿತ್ಸಾ ವೆಚ್ಚ, ಅವರ ಬಿಡುಗಡೆ ದಿನಾಂಕಗಳ ವಿವರಗಳನ್ನು ಬಹಿರಂಗಪಡಿಸಿದೆ.
ಈ ವಿಷಯದ ಬಗ್ಗೆ ಮುಂಬೈನ ವೈದ್ಯಕೀಯ ತಜ್ಞರ ಸಂಸ್ಥೆ ‘ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್’ ಸೈಫ್ ವಿಮಾ ಕ್ಲೇಮ್ ಗಳನ್ನು ಪ್ರಶ್ನಿಸಿದೆ. ಸೈಫ್ ವಿಮೆಯನ್ನು ಬೇಗನೆ ಅನುಮೋದಿಸಿದ ವಿಧಾನವನ್ನು ಪ್ರಶ್ನಿಸಿ ವೈದ್ಯಕೀಯ ತಜ್ಞರ ಸಂಸ್ಥೆ ವಿಮಾ ನಿಯಂತ್ರಣ ಸಂಸ್ಥೆ ‘ಇನ್ಶುರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (IRDAI)’ಗೆ ಪತ್ರ ಬರೆದಿದೆ.
‘‘ಸೈಫ್ ಅಲಿ ಖಾನ್ ಅವರಿಗೆ ತಮ್ಮ ವಿಮಾ ಪಾಲಿಸಿಯಡಿಯಲ್ಲಿ ನಗದು ರಹಿತ ಚಿಕಿತ್ಸೆಗಾಗಿ ₹25 ಲಕ್ಷ ಮಂಜೂರು ಮಾಡಲಾಗಿದೆ ಎಂಬ ಇತ್ತೀಚಿನ ವರದಿಗಳ ಬಗ್ಗೆ ನಮ್ಮ ಕಳವಳ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಲು ಪತ್ರ ಬರೆಯುತ್ತಿದ್ದೇವೆ. ಸಾಮಾನ್ಯ ಪಾಲಿಸಿದಾರರೊಂದಿಗೆ ಹೋಲಿಸಿದರೆ ಸೈಫ್ ಅಲಿ ಖಾನ್ ಗೆ ಹೆಚ್ಚಿನ ಆದ್ಯತೆ ನೀಡಿದಂತೆ ಕಾಣುತ್ತಿದೆ’’ ಎಂದು ಹೇಳಿದೆ.
ಇದು ಸೆಲೆಬ್ರಿಟಿಗಳು, ಗಣ್ಯ ವ್ಯಕ್ತಿಗಳು, ಕಾರ್ಪೊರೇಟ್ ಪಾಲಿಸಿ ಹೊಂದಿರುವವರಿಗೆ ಅನುಕೂಲಕರ ನಿಯಮಗಳು, ಹೆಚ್ಚಿನ ನಗದು ರಹಿತ ಚಿಕಿತ್ಸಾ ಮಿತಿಗಳನ್ನು ಪಡೆಯುತ್ತಿದ್ದಾರೆ, ಆದರೆ ಸಾಮಾನ್ಯ ನಾಗರಿಕರು ಸಾಕಷ್ಟು ಕವರೇಜ್, ಕಡಿಮೆ ಮರುಪಾವತಿ ದರಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವೈದ್ಯರ ಸಂಸ್ಥೆ ಹೇಳಿದೆ. ಈ ಹಣಕಾಸಿನ ವಿಚಾರಗಳು ಹಲವು ಚರ್ಚೆಗೆ ಕಾರಣವಾಗಿದ್ದು, ನಟನ ಮೇಲಿನ ದಾಳಿ ಅನುಮಾನ ಮೂಡಿಸಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
Click