ನ್ಯೂಸ್ ನಾಟೌಟ್: ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ ದಾಳಿ ನಡೆದಿದ್ದು ನಿಜವೇ ಅಥವಾ 54 ವರ್ಷದ ನಟನ ನಟನೆಯೇ ಅಂತ ಬಿಜೆಪಿ ಮಹಾರಾಷ್ಟ್ರದ ಮೀನುಗಾರಿಕೆ ಸಚಿವ ನಿತೇಶ್ ರಾಣೆ ಪ್ರಶ್ನೆ ಮಾಡಿ ಟೀಕಿಸಿದ್ದಾರೆ.
ಚಾಕು ಇರಿತದಿಂದ ಚೇತರಿಸಿಕೊಂಡು 5 ದಿನಗಳ ಬಳಿಕ ಆಸ್ಪತ್ರೆಯಿಂದ ಮನೆಗೆ ವಾಪಾಸ್ಸಾಗಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ವಿರುದ್ಧ ಸಚಿವ ರಾಣೆ ವಾಗ್ದಾಳಿ ನಡೆಸಿದ್ದಾರೆ. ಪುಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿತೇಶ್ ರಾಣೆ, ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಯನ್ನು ಪ್ರಶ್ನಿಸಿದ್ದಾರೆ. ಸೈಫ್ ಅಲಿ ಖಾನ್ ಮೇಲಿನ ದಾಳಿ ನಿಜವೇ ಅಥವಾ 54 ವರ್ಷದ ನಟನ ʻಕೇವಲ ನಟನೆಯೇʼ ಎಂದು ಪ್ರಶ್ನೆ ಮಾಡಿದ್ದಾರೆ.
ಸೈಫ್ ಅಲಿ ಖಾನ್ ಡಿಸ್ಚಾರ್ಜ್ ಆದ ನಂತರ ಅವರನ್ನು ನೋಡಿದಾಗ, ಅವರಿಗೆ ನಿಜವಾಗಿಯೂ ಇರಿದಿದ್ದಾರೆಯೇ ಅಥವಾ ನಟಿಸಿದ್ದಾರೆಯೇ ಎಂದು ನನಗೆ ಅನುಮಾನವಾಯಿತು ಎಂದು ಹೇಳಿದ್ದಾರೆ.
ಮುಂದುವರಿದು, ಶಾರುಖ್ ಖಾನ್, ಸೈಫ್ ಅಲಿ ಖಾನ್ ಅವರಂತಹ ‘ಖಾನ್’ಗಳು ಗಾಯಗೊಂಡಾಗ ಎಲ್ಲರೂ ಅದರ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ಅವರಂತಹ ಹಿಂದೂ ನಟ ಚಿತ್ರಹಿಂಸೆಗೊಳಗಾದಾಗ ಯಾರೂ ಏನನ್ನೂ ಹೇಳಲು ಮುಂದೆ ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.
Click