ನ್ಯೂಸ್ ನಾಟೌಟ್ : ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಸಂದರ್ಶನವೊಂದರಲ್ಲಿ ತಾವು ರಿಲೇಷನ್ಶಿಪ್ನಲ್ಲಿ ಇರುವುದಾಗಿ ಸುಳಿವು ನೀಡಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.ಸದ್ಯ ‘ಛಾವಾ’ (Chhaava) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಟಿ ಬಗ್ಗೆ ಬಿಸಿ ಬಿಸಿ ಚರ್ಚೆ ನಡಿತಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ, ನನಗೆ ನನ್ನ ಮನೆಯೇ ಖುಷಿಯ ಸ್ಥಳ. ಯಶಸ್ಸು ಇಂದು ಬಂದು ಮುಂದೊಂದು ದಿನ ಹೋಗಬಹುದು. ಅದು ಎಂದಿಗೂ ಶಾಶ್ವತವಲ್ಲ. ಎಷ್ಟೇ ಸಿಕ್ಕರೂ ಕೂಡ ನಾನು ನಟಿ ಮಾತ್ರವಲ್ಲದೇ ಮಗಳು, ಸಹೋದರಿ, ಓರ್ವ ಪಾರ್ಟ್ನರ್ ಕೂಡ ಹೌದು ಎಂದು ಹೇಳಿದ್ದಾರೆ. ಎಲ್ಲೂ ಕೂಡ ಸಂಗಾತಿ ಯಾರು ಎಂದು ಹೆಸರನ್ನು ಅವರು ಬಹಿರಂಗ ಪಡಿಸಿಲ್ಲ. ಆದರೆ ಪಾರ್ಟ್ನರ್ ಎಂದು ಪದ ಬಳಸಿದ ರಶ್ಮಿಕಾ ಕುರಿತಂತೆ ಹಲವು ಹಲವು ಅಭಿಪ್ರಾಯಗಳನ್ನು ತಿಳಿಸಿದ್ದು, ತಾವು ರಿಲೇಷನ್ಶಿಪ್ನಲ್ಲಿರೋದಾಗಿ ಅಧಿಕೃತಪಡಿಸಿದರೇ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.