ನ್ಯೂಸ್ ನಾಟೌಟ್: ಪ್ರಯಾಗ್ ರಾಜ್ ಗೆ ತೆರಳುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಪ್ರಕರಣ ಇಂದು(ಜ.28) ಬೆಳಕಿಗೆ ಬಂದಿದೆ. ಈ ಘಟನೆ ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ.
ಗುಂಪೊಂದು ರೈಲಿನ ಮೇಲೆ ದಿಢೀರ್ ದಾಳಿ ಮಾಡಿತು. ದಾಳಿಯ ವೇಳೆ ರೈಲು ನಿಲ್ದಾಣದಲ್ಲಿ ನಿಂತಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಮಹಾಕುಂಭದ ನಿಮಿತ್ತ ಪ್ರಯಾಗ್ರಾಜ್ ಗೆ ತೆರಳುವ ಪ್ರತಿ ರೈಲಿನಲ್ಲಿ ಭಾರಿ ಜನಸಂದಣಿ ಕಂಡುಬರುತ್ತಿರುವುದು ಸಹಜವಾಗಿದೆ. ಈ ವೇಳೆ ದಾಳಿಕೋರರು ಕಲ್ಲು ತೂರಾಟ ನಡೆಸಿದ್ದಲ್ಲದೆ ರೈಲು ಧ್ವಂಸಗೊಳಿಸಿದ್ದಾರೆ. ರೈಲಿನೊಳಗೆ ಕುಳಿತಿದ್ದ ಜನರು ಭಯಭೀತರಾಗಿದ್ದಾರೆ. ಈ ಬಗ್ಗೆ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click