ರೈಲಿನೊಳಗೆ ಬೆಡ್ ​ಶೀಟ್ ​ಗಳನ್ನು ಕದ್ದು ಸಿಕ್ಕಿ ಬಿದ್ದ ಯುವತಿ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ರೈಲಿನೊಳಗೆ ಬೆಡ್ ​ಶೀಟ್ ​ಗಳನ್ನು ಕದ್ದು ಯುವತಿಯೊಬ್ಬಳು ರೈಲ್ವೆ ಸಿಬ್ಬಂದಿ ಬಳಿ ರೆಡ್ ​ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ ​ರಾಜ್ ​ನಲ್ಲಿ ನಡೆದಿದೆ. ರೈಲ್ವೆ ಸಿಬ್ಬಂದಿ ಪ್ಲಾಟ್‌ ಫಾರ್ಮ್‌ನಲ್ಲಿ ಪ್ರಯಾಣಿಕರ ಲಗೇಜ್‌ಗಳನ್ನು ಪರಿಶೀಲಿಸುತ್ತಿದ್ದ ವೇಳೆ ರೈಲ್ವೆ ಬೋಗಿಗಳಲ್ಲಿರಿಸಿದ್ದ ಟವೆಲ್​ಗಳು ಹಾಗೂ ಬೆಡ್​ಶೀಟ್​ಗಳನ್ನು ಕದ್ದಿರುವುದು ದೃಢಪಟ್ಟಿದೆ. 2018 ರಲ್ಲಿ 2 ಲಕ್ಷಕ್ಕೂ ಹೆಚ್ಚು ಟಾವೆಲ್ ಗಳು ಮತ್ತು 7 ಸಾವಿರಕ್ಕೂ ಬೆಡ್ ​ಶೀಟ್ ಗಳು ಕಳ್ಳತನವಾಗಿದ್ದದ್ದು ಬೆಳಕಿಗೆ ಬಂದಿತ್ತು. ತನಿಖೆಯ ಬಳಿಕ ಅಂತಹ ಪ್ರಕರಣಗಳು ಕಡಿಮೆಯಾಗಿತ್ತು. ಈಗ ಮತ್ತೆ ಪ್ರಯಾಗ್ ​ರಾಜ್ ​ನಲ್ಲಿ ಕಳ್ಳತನ ಮರುಕಳಿಸಿದೆ. ಪ್ರಯಾಣಿಕರ ಕಂಬಳಿಗಳು ಮತ್ತು ದಿಂಬುಗಳಂತಹ ರೈಲ್ವೆ ಆಸ್ತಿಯನ್ನು ಕದಿಯುವ ಪ್ರಕರಣಗಳು ದಿನದಿಂದ ಹೆಚ್ಚುತ್ತಿವೆ ಎನ್ನಲಾಗಿದ್ದು, ಆಕೆಗೆ ಕಠಿಣ ದಂಡ ವಿಧಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. Click