ನ್ಯೂಸ್ ನಾಟೌಟ್: ವಿವಾದಿತ ನಟಿ ಎಂದೇ ಕರೆಯಲ್ಪಡುವ ನಟಿ ರಾಖಿ ಸಾವಂತ್ (Rakhi Sawant) ಮೂರನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಇತ್ತೀಚೆಗೆ ರಾಖಿ ಸಾವಂತ್ ಪಾಕಿಸ್ತಾನಕ್ಕೆ ಹೋಗಿ, ಅಲ್ಲಿ ಪಾಕ್ ನಟಿ ಹನಿಯಾ ಅಮೀರ್ ಅವರನ್ನು ಭೇಟಿ ಆಗುವುದಾಗಿ ಹೇಳಿದ್ದರು. ಏರ್ ಪೋರ್ಟ್ ನಲ್ಲಿ ಸೂಟ್ ಕೇಸ್ ಹಿಡಿದುಕೊಂಡು ಫೋಟೋ ಹಂಚಿಕೊಂಡಿದ್ದರು.
ನಟಿ ತನ್ನ ವಿವಾಹದ ಬಗ್ಗೆ ಮಾತನಾಡಿದ್ದು, “ನನಗೆ ಹಲವು ಮದುವೆ ಪ್ರಸ್ತಾವನೆಗಳು ಬರುತ್ತಿವೆ. ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ನನ್ನ ಹಿಂದಿನ ಮದುವೆಗಳಲ್ಲಿ ನನಗೆ ಆಗಿರುವ ಹಿಂಸೆ ಹಾಗೂ ಕಿರುಕುಳವನ್ನು ಅವರು ನೋಡಿದ್ದಾರೆ. ಖಂಡಿತವಾಗಿಯೂ ಒಂದು ನಿರೀಕ್ಷೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದೇನೆ” ಎಂದಿದ್ದಾರೆ.
“ನಾನು ಪಾಕಿಸ್ತಾನಿ ಜನರನ್ನು ಇಷ್ಟಪಡುತ್ತೇನೆ ಮತ್ತು ಅಲ್ಲಿ ನನಗೆ ಅನೇಕ ಅಭಿಮಾನಿಗಳಿದ್ದಾರೆ. ನಮ್ಮ ಒಗ್ಗಟ್ಟಿನಿಂದ ಉಭಯ ದೇಶಗಳ ನಡುವೆ ಶಾಂತಿ ನೆಲೆಸಲಿದೆ. ನನ್ನ ಪಾಕಿಸ್ತಾನಿ ಸಂಗಾತಿ ದೋದಿ ಖಾನ್ ಮತ್ತು ನಾನು ಇಸ್ಲಾಮಿಕ್ ಸಂಪ್ರದಾಯಗಳ ಪ್ರಕಾರ ವಿವಾಹ ಆಗಲಿದ್ದೇವೆ. ಆರತಕ್ಷತೆ ಭಾರತದಲ್ಲಿ ನಡೆಯುತ್ತದೆ.
ಸ್ವಿಟ್ಜರ್ಲೆಂಡ್ ಮತ್ತು ನೆದರ್ ಲ್ಯಾಂಡ್ ಗೆ ನಾವು ಹನಿಮೂನ್ ಹೋಗಲಿದ್ದೇವೆ. ದುಬೈನಲ್ಲಿ ಸೆಟಲ್ ಆಗಲಿದ್ದೇವೆ” ಎಂದು ರಾಖಿ ಹೇಳಿದ್ದಾರೆ.ಈ ಹಿಂದೆ ರಾಖಿ ಸಾವಂತ್ ರಿತೇಶ್ ರಾಜ್ ಸಿಂಗ್ ಎನ್ನುವರ ಜತೆ ವಿವಾಹವಾಗಿದ್ದರು. ಇದಾದ ಬಳಿಕ ಆದಿಲ್ ಖಾನ್ ದುರಾನಿ ಜತೆ ವಿವಾಹವಾಗಿದ್ದರು.