ನ್ಯೂಸ್ ನಾಟೌಟ್: ದೆಹಲಿ ಚಿತ್ರತಂಡ ಸಿದ್ಧಪಡಿಸಿದ ‘ಅನುಜಾ’ ಕಿರು ಚಿತ್ರ ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್ ವರ್ಗದಲ್ಲಿ 97ನೇ ಅಕಾಡೆಮಿ ಅವಾರ್ಡ್ಸ್ನಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಪಡೆದಿದೆ.
ಆಡಂ ಗ್ರೇವ್ಸ್ ಮತ್ತು ಸುಚಿತ್ರಾ ಮತ್ತಾಯಿ ನಿರ್ದೇಶನದ ಈ ಚಿತ್ರ ‘ಎ ಲೀನ್ ಐ ಆ್ಯಮ್ ನಾಟ್ ಎ ರೋಬೋಟ್’, ದ ‘ಲಾಸ್ಟ್ ರೇಂಜರ್’ ಮತ್ತು ‘ದ ಮ್ಯಾನ್ ಹೂ ಕುಡ್ ನಾಟ್ ರಿಮೈನ್ ಸೈಲೆಂಟ್’ ಚಿತ್ರಗಳ ಜತೆ ಪ್ರಶಸ್ತಿ ಸುತ್ತಿನಲ್ಲಿ ಪೈಪೋಟಿ ನೀಡಲಿದೆ.
ಲಾಸ್ ಎಂಜಲೀಸ್ ನಲ್ಲಿ ಭುಲಿಗೆದ್ದ ಕಾಡ್ಗಿಚ್ಚಿನಿಂದಾಗಿ ಎರಡು ಬಾರಿ ಆಸ್ಕರ್ ನಾಮನಿರ್ದೇಶನವನ್ನು ಮುಂದೂಡಲಾಗಿದ್ದು, ಇದೀಗ ನಾಮನಿರ್ದೇಶನಗೊಂಡ ಚಿತ್ರಗಳ ಪಟ್ಟಿಯನ್ನು ಬೊವೆನ್ ಯಂಗ್ ಮತ್ತು ರಚೆಲ್ ಸೆನೊಟ್ ಪ್ರಕಟಿಸಿದ್ದಾರೆ.
ಶಿಕ್ಷಣದ ಜತೆಗೆ ಸಹೋದರಿಯೊಂದಿಗೆ ಫ್ಯಾಕ್ಟರಿ ಕೆಲಸ ಮಾಡುತ್ತಿರುವ ಅನುಜಾ ಎಂಬ ಒಂಬತ್ತು ವರ್ಷದ ಬಾಲಕಿಯ ಜೀವನಕಥೆಯನ್ನು ಈ ಚಿತ್ರ ಆಧರಿಸಿದೆ. ಇಬ್ಬರು ಹೆಣ್ಣುಮಕ್ಕಳ ಭವಿಷ್ಯವನ್ನು ರೂಪಿಸುವ ಮಹತ್ವದ ನಿರ್ಧಾರದ ಸುತ್ತ ಕಥೆ ಹೆಣೆಯಲಾಗಿದೆ. ಸಜ್ದಾ ಪಠಾಣ್ ಮತ್ತು ಅನನ್ಯಾ ಶಾನಭಾಗ್ ಪ್ರಮುಖ ತಾರಾಗಣದಲ್ಲಿದ್ದಾರೆ.
ಎರಡು ಬಾರಿ ಆಸ್ಕರ್ ಪ್ರಶಸಿ ಗೆದ್ದಿರುವ ನಿರ್ಮಾಪಕ ಗುನೀತ್ ಮೊಂಗಾ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದು, ಹಾಲಿವುಡ್ ತಾರೆ- ಲೇಖಕ ಮಿಂಡಿ ಕಲಿಂಗ್ ನಿರ್ಮಾಪಕರಾಗಿದ್ದಾರೆ.
ಚಿತ್ರನಿರ್ಮಾಪಕಿ ಮೀರಾ ನಾಯರ್ ಬೀದಿ ಮತ್ತು ದುಡಿಯುವ ಮಕ್ಕಳ ಬೆಂಬಲಾರ್ಥವಾಗಿ ರಚಿಸಿರುವ ಸಲಾಮ್ ಬಾಲಕ್ ಟ್ರಸ್ಟ್ ಎಂಬ ಲಾಭರಹಿತ ಸಂಸ್ಥೆ, ಶೈನ್ ಗ್ಲೋಬಲ್ ಮತ್ತು ಕೃಷನ್ ನಾಯ್ಕ್ ಫಿಲಂಸ್ ಸಹಯೋಗದಲ್ಲಿ ಈ ಚಿತ್ರ ನಿರ್ಮಿಸಲಾಗಿದೆ.
Click