ನ್ಯೂಸ್ ನಾಟೌಟ್: ನಾಲ್ವರು ಮಕ್ಕಳೊಂದಿಗೆ ಕಾಲುವೆಗೆ ಬಿದ್ದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಕ್ಕಳನ್ನು ಕಾಲುವೆ ಎಸೆದು ಸಾಯಿಸಿದ ತಾಯಿ ಭಾಗ್ಯಶ್ರೀ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ.
ಜನವರಿ 13ರಂದು ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿಯ ಕಾಲುವೆಗೆ ತನ್ನ ನಾಲ್ವರು ಮಕ್ಕಳನ್ನು ಎಸೆದು ಭಾಗ್ಯಶ್ರೀ ಸಹ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆದ್ರೆ, ಮೀನುಗಾರರು ಭಾಗ್ಯಶ್ರೀಯನ್ನು ಕಾಪಾಡಿ ಜೀವ ಉಳಿಸಿದ್ದಾರೆ. ಆದರೆ, ಮಕ್ಕಳು ಮಾತ್ರ ಸಾವನ್ನಪ್ಪಿದ್ದು, ಇದೀಗ ಭಾಗ್ಯಶ್ರೀ ವಿರುದ್ಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯಕ್ಷದರ್ಶಿ ಫಾರೆಸ್ಟ್ ಗಾರ್ಡ್ ನಾಗೇಶ ನೀಡಿದ ದೂರಿನ ಅನ್ವಯ ಭಾಗ್ಯಶ್ರೀ ವಿರುದ್ಧ ನಿಡಗುಂದಿ ಪೊಲೀಸ್ ಠಾಣೆಯನ್ನು ಸೆಕ್ಷನ್ 302ರ ಅಡಿಯಲ್ಲಿ ಎಫ್ ಐಆರ್ ದಾಖಲಾಗಿದೆ. ಇನ್ನು ತನ್ನ ನಾಲ್ವರು ಮಕ್ಕಳಾದ ತನು(5), ರಕ್ಷಾ(3), ಅವಳಿ ಮಕ್ಕಳಾದ ಹಸೇನ್, ಹುಸೇನ್ ಎನ್ನುವರನ್ನು ಕಾಲುವೆಗೆ ಎಸೆದು ಬಳಿಕ ತಾನು ಸಹ ಜಿಗಿದ ಭಾಗ್ಯಶ್ರೀಯನ್ನು ಮೀನುಗಾರರು ರಕ್ಷಣೆ ಮಾಡಿದ್ದು, ಸದ್ಯ ಭಾಗ್ಯಶ್ರೀ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾಗ್ಯಶ್ರೀ ಜನವರಿ 13 ರಂದು ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿಯ ಆಲಮಟ್ಟಿ ಎಡದಂಡೆ ಕಾಲುವೆಗೆ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದಿದ್ದರು. ಬಳಿಕ ತಾನೂ ಸಹ ಹಾರಿದ್ದರು. ಗಂಡ ಬೈಕ್ ಗೆ ಪೆಟ್ರೋಲ್ ತರಲು ಹೋದಾಗ ಭಾಗ್ಯಶ್ರೀ ಎರಡೂ ಹೆಣ್ಣು, ಎರಡೂ ಗಂಡು ಮಕ್ಕಳ ಸಮೇತ ಕೆನಾಲ್ ಹಾರಿದ್ದಳು. ಆದರೆ, ಮೀನುಗಾರರು ಭಾಗ್ಯಶ್ರೀಯನ್ನು ಕಾಪಾಡಿದ್ದರು. ನಾಲ್ವರು ಮಕ್ಕಳು ಮಾತ್ರ ಜಲಸಮಾಧಿಯಾಗಿದ್ದರು.
ಇನ್ನು ಈ ಘಟನೆಗೆ ಆಕೆಯ ಪತಿ ನಿಂಗರಾಜ ಹಾಗೂ ಮನೆಯವರು ಕಾರಣ ಎಂದು ಆ ಮಹಿಳೆಯ ತವರಿನ ಕುಟುಂಬಸ್ಥರು ಆರೋಪಿಸಿದ್ದಾರೆ. ತಮ್ಮ ಒಬ್ಬಳೇ ಮಗಳಾದ ಭಾಗ್ಯಶ್ರೀಯನ್ನು ತೆಲಗಿ ಗ್ರಾಮದ ನಿಂಗರಾಜನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ನಿಂಗರಾಜನಿಗೆ ಸಾಲ ಇದ್ದು, ಅದನ್ನು ತೀರಿಸಲು ಜಮೀನು ಮಾರಾಟ ಮಾಡುವುದಾಗಿ ಆತನ ಮನೆಯವರು ಹೇಳಿದ್ದರು. ಈ ವಿಚಾರವಾಗಿ ಜಗಳವಾಗಿತ್ತು. ಈ ವೇಳೆ ತನ್ನ ಮಗಳ ಮೇಲೆ ಅಳಿಯ ನಿಂಗರಾಜ ಹಾಗೂ ಆತನ ತಂದೆ ಮತ್ತು ತಾಯಿ ಹಲ್ಲೆ ಮಾಡಿದ್ದರು ಎಂದು ಆಪಾದಿಸಿದ್ದಾರೆ. ಈಗ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.