ನ್ಯೂಸ್ ನಾಟೌಟ್: ಕೋತಿಗಳ ಗುಂಪೊಂದು ಛಾವಣಿಯಿಂದ ಅಚಾನಕ್ಕಾಗಿ ಬಾಲಕಿಯನ್ನು ತಳ್ಳಿದ ಪರಿಣಾಮ ಬಿಹಾರದ ಸಿವಾನ್ ನಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಇಂದು(ಜ.26) ನಡೆದಿದೆ.
ಪ್ರಿಯಾ ಕುಮಾರಿ ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ಈಕೆ ಛಾವಣಿ ಮೇಲೆ ಕುಳಿತು ಓದುತ್ತಿದ್ದಳು. ಈ ವೇಳೆ ಕೋತಿಗಳು ಆಕೆ ಮೇಲೆ ದಾಳಿ ಮಾಡಿವೆ. ಭಯಭೀತಳಾಗಿ ಕೋತಿಗಳಿಂದ ತಪ್ಪಿಸಿಕೊಳ್ಳಲು ಬಾಲಕಿ ಮುಂದಾಗಿದ್ದಾಳೆ.
ತಪ್ಪಿಸಿಕೊಳ್ಳುವ ಭರದಲ್ಲಿ ಛಾವಣಿಯಿಂದ ಬಾಲಕಿ ಬಿದ್ದಿದ್ದಾಳೆ ಎನ್ನಲಾಗಿದೆ. ಬಾಲಕಿ ಗಂಭೀರ ಗಾಯಗೊಂಡಿದ್ದಳು. ಆಕೆಯ ತಲೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರವಾದ ಗಾಯಗಳಾಗಿವೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಕುಟುಂಬ ಸದಸ್ಯರು ಚಿಕಿತ್ಸೆಗಾಗಿ ಸಿವಾನ್ ಸದರ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
Click