ನ್ಯೂಸ್ ನಾಟೌಟ್: ತಂದೆಯೊಂದಿಗೆ ಸುಳ್ಯದತ್ತ ಪ್ರಯಾಣಿಸುತ್ತಿದ್ದ ಬಸ್ ಗೆ ಹತ್ತಿದ ಬಾಲಕನೊಬ್ಬ ಸುಳ್ಯ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಕೆಳಕ್ಕೆ ಇಳಿದ ಸಂದರ್ಭದಲ್ಲಿ ನಾಪತ್ತೆಯಾಗಿರುವ ಘಟನೆ ಮಂಗಳವಾರ ನಡೆದಿದೆ.
ಪುತ್ತೂರಿನ ಕುಂಬ್ರದಿಂದ ವಿಶೇಷ ಚೇತನ ಬಾಲಕನೊಬ್ಬ ತಂದೆಯೊಂದಿಗೆ ಸುಳ್ಯದತ್ತ ಪ್ರಯಾಣಿಸುತ್ತಿದ್ದ ಬಸ್ ಗೆ ಹತ್ತಿದ್ದಾನೆ. ಬಸ್ ಸ್ವಲ್ಪ ರಶ್ ಇದ್ದುದರಿಂದ ತಂದೆ ಸ್ವಲ್ಪ ಮುಂದುಗಡೆ ಇದ್ದರು. ಈ ವೇಳೆ ಮಗ ಹಿಂಬದಿ ಇದ್ದನೆಂದು ಹೇಳಲಾಗಿದೆ.
ವಿಶೇಷ ಚೇತನ ಬಾಲಕ ದಾರಿ ಮಧ್ಯೆ ಎಲ್ಲೋ ಇಳಿದಿರಬೇಕು ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಸುಳ್ಯದಲ್ಲಿ ಬಸ್ ಬಂದು ನಿಂತಾಗ ಪ್ರಯಾಣಿಕರೆಲ್ಲರು ಕೆಳಕ್ಕೆ ಇಳಿಯುತ್ತಾರೆ. ಆದರೆ ಆ ಬಾಲಕ ಬಸ್ ನಲ್ಲಿ ಇರಲಿಲ್ಲ. ಸುತ್ತಮುತ್ತ ಹುಡುಕಾಡಿದರೂ ಸಿಗಲಿಲ್ಲ. ತಕ್ಷಣ ಪೊಲೀಸ್ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Click