- +91 73497 60202
- [email protected]
- January 7, 2025 2:39 PM
ನ್ಯೂಸ್ ನಾಟೌಟ್: ನಮ್ಮ ಮೆಟ್ರೋ ರೈಲಿನಲ್ಲಿ ಯುವತಿಯರ ಅಂಗಾಂಗಗಳ ವಿಡಿಯೋ ಹಾಗೂ ಫೋಟೋ ತೆಗೆಯುತ್ತಿದ್ದ ಕಾಮುಕನನ್ನು ಮೆಟ್ರೋ ನಿಲ್ದಾಣದ ಸೆಕ್ಯೂರಿಟಿ ಗಾರ್ಡ್‍ಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಅಲ್ಲದೇ ಆರೋಪಿಗೆ ಬಿಎಂಆರ್‌ಸಿಎಲ್ 5,000 ರೂ. ದಂಡ ವಿಧಿಸಿದೆ. ವಶಕ್ಕೆ ಪಡೆಯಲಾದ ಆರೋಪಿಯನ್ನು ಮಹೇಶ್ ಎಂದು ಗುರುತಿಸಲಾಗಿದೆ. ಆರೋಪಿ, ಮೆಟ್ರೋದಲ್ಲಿ ಪ್ರಯಾಣ ಮಾಡುವ ಮಹಿಳೆಯರ ಅಂಗಾಂಗಗಳ ಫೋಟೋ ಹಾಗೂ ವಿಡಿಯೋ ತೆಗೆಯುತ್ತಿದ್ದ. ಆರೋಪಿಯ ಮೊಬೈಲ್ ನಲ್ಲಿ ಸುಮಾರು 50 ಯುವತಿಯರ ವಿಡಿಯೋ ಮತ್ತು ಫೋಟೋಗಳು ಪತ್ತೆಯಾಗಿವೆ. ಡಿ.25 ರಂದು ಬೆಳಿಗ್ಗೆ 9 ಗಂಟೆಗೆ ಯುವತಿಯೊಬ್ಬಳು ಮೆಜೆಸ್ಟಿಕ್ ನಿಂದ ಜೆಪಿ ನಗರ ಮೆಟ್ರೋ ಸ್ಟೇಷನ್ ಗೆ ಹೋಗುತ್ತಿದ್ದಳು. ಈ ವೇಳೆ ಯುವಕ, ಯುವತಿಯ ಖಾಸಗಿ ಅಂಗಾಂಗಗಳ ವಿಡಿಯೋ ತೆಗೆಯುತ್ತಿದ್ದನ್ನು ಗಮನಿಸಿ ಆತನಿಗೆ ಹೊಡೆದಿದ್ದಾಳೆ. ಈ ವೇಳೆ ನೈಟ್ ಡ್ಯೂಟಿ ಮುಗಿಸಿ ಮನೆಗೆ ಹೋಗುತ್ತಿದ್ದ ಇಬ್ಬರು ಸೆಕ್ಯೂರಿಟಿಗಳು ಯುವತಿಯ ಸಹಾಯಕ್ಕೆ ಧಾವಿಸಿದ್ದಾರೆ. ಈ ವೇಳೆ ಮಹೇಶ್ ನ ಕೃತ್ಯ ಬೆಳಕಿಗೆ ಬಂದಿದೆ. ಜಯನಗರ ಮೆಟ್ರೋ ಸ್ಟೇಷನ್ ನಲ್ಲಿ ಯುವಕನನ್ನು ರೈಲಿನಿಂದ ಕೆಳಗಿಳಿಸಿ, ಮೊಬೈಲ್ ಪರಿಶೀಲನೆ ನಡೆಸಿದಾಗ ವಿಡಿಯೋ ಹಾಗೂ ಫೋಟೋಗಳು ಪತ್ತೆಯಾಗಿವೆ. ಆತನನ್ನು ಜಯನಗರ ಪೊಲೀಸರ ವಶಕ್ಕೆ ನೀಡಲಾಗಿದೆ.ಡ್ಯೂಟಿಯಲ್ಲಿ ಇಲ್ಲದಿದ್ದರೂ ಯುವತಿಯ ಸಹಾಯಕ್ಕೆ ಧಾವಿಸಿದ ಮೆಟ್ರೋ ಸೆಕ್ಯುರಿಟಿ ಗಾರ್ಡ್ ಸುಜೀತ್ ಹಾಗೂ ಎಸ್.ಜಿ ರಾಮ್ ಬಹದ್ದೂರ್ ಅವರನ್ನು BMRCL ಅಭಿನಂದಿಸಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ