ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಅನಾವರಣ, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್ : ಭಾರತದಲ್ಲಿರುವ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಕಂಪನಿಯು ತನ್ನ ಮೊದಲ ಇ ವಿಟಾರಾ (e Vitara) ಎಂಬ ಹೆಸರಿನ ಎಲೆಕ್ಟ್ರಿಕ್ ಕಾರನ್ನು 2025ರ ಆಟೋ ಎಕ್ಸ್‌ ಪೋದಲ್ಲಿ ಅನಾವರಣಗೊಳಿಸಿದೆ. ಈ ಕಾರಿನ ಬೆಲೆಯನ್ನು ಮಾರ್ಚ್ ತಿಂಗಳಲ್ಲಿ ಘೋಷಿಸಲಾಗುತ್ತದೆ ಎಂದು ತಿಳಿಸಿದೆ. ಇ ವಿಟಾರಾ 49kWh ಮತ್ತು 61kWh ಬ್ಯಾಟರಿ ಪ್ಯಾಕ್‌ ಗಳನ್ನು ಹೊಂದಿದೆ. BYD ಕಂಪನಿಯ LFP (ಲಿಥಿಯಂ ಐರನ್-ಫಾಸ್ಫೇಟ್) ‘ಬ್ಲೇಡ್’ ಸೆಲ್‌ಗಳನ್ನು ಈ ಬ್ಯಾಟರಿಗಳಲ್ಲಿ ಬಳಸಲಾಗಿದೆ. ದೊಡ್ಡ ಬ್ಯಾಟರಿ ಪ್ಯಾಕ್ 500km ಗಿಂತ ಹೆಚ್ಚು MIDC-ರೇಟೆಡ್ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳುತ್ತಿದೆ. 4,275 ಎಂಎಂ ಉದ್ದ, 1,800 ಎಂಎಂ ಅಗಲ, 1,635 ಎಂಎಂ ಎತ್ತರ, 2,700 ಎಂಎಂ ವೀಲ್‌ ಬೇಸ್ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಈ ಎಲೆಕ್ಟ್ರಿಕ್ ಕಾರು ಹೊಂದಿದ್ದು, 5.2 ಮೀಟರ್ ಟರ್ನಿಂಗ್ ರೇಡಿಯಸ್ ಹೊಂದಿದೆ. ಅತ್ಯಾಕರ್ಷಕ ಡಿಸೈನ್ ಹೊಂದಿರುವ ಈ ಕಾರು ಮುಂಬದಿ ಮತ್ತು ಹಿಂಬದಿಯಲ್ಲಿ 3 ಪಾಯಿಂಟ್ ಮ್ಯಾಟ್ರಿಕ್ಸ್ ಡೇ ಟೈಮ್ LED DRLs ಒಳಗೊಂಡಿರುವ LED ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಎಡಬದಿಯಲ್ಲಿ ಚಾರ್ಜಿಂಗ್ ಪೋರ್ಟ್, 18 ಇಂಚಿನ ಏರೋಡೈನಾಮಿಕ್ ಅಲಾಯ್ ವೀಲ್‌ ಗಳೊಂದಿಗೆ ಬರಲಿದೆ. ಮಾರುತಿ ಸುಜುಕಿ ಇ ವಿಟಾರಾ ಮಹೀಂದ್ರಾ BE6, ಟಾಟಾ ಕರ್ವ್ ಇವಿ ಮತ್ತು ಎಂಜಿ ZS ಇವಿಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. Click