- +91 73497 60202
- [email protected]
- January 8, 2025 2:59 PM
ನ್ಯೂಸ್ ನಾಟೌಟ್ : ವಿವಾಹಿತ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಮನೆಗೆ ಹೋಗಿ ಹಿಂತಿರುಗುತ್ತಿದ್ದಾಗ ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ಅಟ್ಟಾಡಿಸಿ ಹೊಡೆದು ಹತ್ಯೆಗೈದ ಘಟನೆ ಕೋಲಾರದ ನೂರ್ ನಗರ ಎಂಬಲ್ಲಿ ಶನಿವಾರ(ಜ.4) ಮಧ್ಯರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಉಸ್ಮಾನ್ ಎಂದು ಗುರುತಿಸಲಾಗಿದೆ. ಆತ ತನ್ನ ಪ್ರೇಯಸಿ ಮನೆಗೆ ಹೋಗಿ ಬರುವಾಗ ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ಅಟ್ಟಾಡಿಸಿ ಹೊಡೆದಿದ್ದಾರೆ. ಬಳಿಕ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.ಉಸ್ಮಾನ್ ಕಳೆದೆ ಐದು ವರ್ಷಗಳ ಹಿಂದೆ ಜಬೀನ್ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆಕೆಗೆ ಕಿಡ್ನಿ ವಿಫಲವಾಗಿ ಅನಾರೋಗ್ಯದಿಂದ ಬಳಲುತ್ತಿದ್ದು, ಈ ವೇಳೆ ಆರೋಗ್ಯ ವಿಚಾರಿಸಲು ಬಂದಿದ್ದ ಜಬೀನಾಳ ಸಂಬಂಧಿ ಯುವತಿಯೊಂದಿಗೆ ಉಸ್ಮಾನ್ ಗೆ ಪ್ರೀತಿಯಾಗಿದೆ. ಈ ವಿಷಯ ತಿಳಿದು ಆತನ ಪತ್ನಿ ಮಹಿಳಾ ಠಾಣೆಗೆ ದೂರು ನೀಡಿದ್ದಳು. ಬಳಿಕ ತನ್ನ ಪತಿಯಿಂದ ದೂರಾಗಿ ತವರು ಮನೆ ಸೇರಿದ್ದಳು ಎಂದು ತಿಳಿದು ಬಂದಿದೆ. ಕೊಲೆಯಾದ ಉಸ್ಮಾನ್ ಕಳೆದ ರಾತ್ರಿ ತನ್ನ ಪ್ರೇಯಸಿಯ ಮನೆಗೆ ತೆರಳಿದ್ದ. ಅಲ್ಲದೇ ಆಕೆಯನ್ನು ಮದುವೆ ಮಾಡಿಕೊಡುವಂತೆ ಕೇಳಿದ್ದ ಎನ್ನಲಾಗಿದೆ. ಇದರಿಂದ ಆತ ವಾಪಸ್ ತೆರಳುತ್ತಿದ್ದಾಗ ಯುವತಿಯ ಕುಟುಂಬಸ್ಥರು ಹಾಗೂ ಸ್ಥಳೀಯರು, ಉಸ್ಮಾನ್ ನನ್ನು ಏರಿಯಾದಲ್ಲಿ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದಾನೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ