ನ್ಯೂಸ್ ನಾಟೌಟ್:ಮಂಗಳೂರು ನಗರದ ಕಾರಾಗೃಹದೊಳಗೆ ಮೊಬೈಲ್ ಮತ್ತು ಸಿಗರೇಟ್ ಎಸೆಯಲು ಯತ್ನಿಸಿದ ಆರೋಪಿಯನ್ನು ಬರ್ಕೆ ಠಾಣಾ ಪೊಲೀಸರು ಜ.6 ರಂದು ಬಂಧಿಸಿದ್ದಾರೆ.
ಪಂಜಿಮೊಗರಿನ ಪ್ರಜ್ವಲ್ (21) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಈತ ಭಾನುವಾರ ಅಪರಾಹ್ನ 3ಕ್ಕೆ ಕೆನರಾ ಕಾಲೇಜಿನ ಮುಖ್ಯದ್ವಾರದ ಒಳಗೆ ಪ್ರವೇಶಿಸಿ ಅಲ್ಲಿಂದ ಕಾರಾಗೃಹದ ಒಳಗೆ ಕೆಂಪು ಬಣ್ಣದ ಗಮ್ ಟೇಪ್ ನಿಂದ ಸುತ್ತಿದ ಪೊಟ್ಟಣಗಳನ್ನು ಎಸೆಯಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಗಸ್ತುನಿರತ ಕೆಎಸ್ ಐ ಎಸ್ ಎಫ್ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಟ್ಟಣದೊಳಗೆ ಎರಡು ಕೀ ಪ್ಯಾಡ್ ಮೊಬೈಲ್ ಮತ್ತು ಎರಡು ಪ್ಯಾಕೆಟ್ ಸಿಗರೇಟ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Click