ನ್ಯೂಸ್ ನಾಟೌಟ್: ಮೈಸೂರಿನಲ್ಲಿ ನಡೆದ ಭೀಕರ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಪತಿಯೇ ಪತ್ನಿಯ ಶಿರಚ್ಛೇದ ಮಾಡಿರುವ ಘಟನೆ ನಡೆದಿದ್ದು, ತೇಜು (26) ಕೊಲೆಯಾದ ಪತ್ನಿ ಎಂದು ತಿಳಿದು ಬಂದಿದೆ.
ಈಕೆಗೆ ಪರಪುರಷನೊಂದಿಗೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದ್ದು ಘಟನೆಗೆ ಕಾರಣವೆನ್ನಲಾಗಿದೆ. ಈತ ಬರ್ಬರವಾಗಿ ಹತ್ಯೆಗೈದಿದ್ದು ಮಾತ್ರವಲ್ಲದೇ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿ ಈ ಘಟನೆ ಸಂಭವಿಸಿದೆ.
ಕಳೆದ ಏಳು ವರ್ಷಗಳ ಹಿಂದೆ ದೇವರಾಜ್ ಎನ್ನುವಾತ ಸಂಬಂಧಿಯಾಗಿದ್ದ ತೇಜಳನ್ನು ಮದುವೆಯಾಗಿದ್ದ. ಎರಡು ಮಕ್ಕಳು ಸಹ ಇವೆ. ಆದರೂ ತೇಜ ಪರಪುರಷನೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಗಂಡ ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಮನೆ ಬಿಟ್ಟು ಓಡಿಹೋಗಿದ್ದಳು.ಬಳಿಕ ರಾಜೀ ಸಂಧಾನ ಮಾಡಿ ವಾರದ ಹಿಂದೆ ಪತಿ ದೇವರಾಜ್ ಪತ್ನಿಯನ್ನು ಮನೆ ಸೇರಿಸಿಕೊಂಡಿದ್ದ. ಆದರೂ ದೇವರಾಜ್ಗೆ ಊರಿನಲ್ಲಿ ತಲೆ ಎತ್ತಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ಕೋಪದಲ್ಲಿ ಹೆಂಡ್ತಿ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.
ತೇಜು ಬೇರೆ ವ್ಯಕ್ತಿ ಜೊತೆ ಸಂಬಂಧವಿರಿಸಿಕೊಂಡಿದ್ದು, ಮನೆ ಬಿಟ್ಟು ಓಡಿಹೋಗಿದ್ದಳು. ಇದರಿಂದ ಪತಿ ದೇವರಾಜ್ಗೆ ಊರಿನಲ್ಲಿ ಮುಜುಗರಕ್ಕೊಳಗಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಬಳಿಕ ರಾಜೀ ಪಂಚಾಯಿತಿ ಮಾಡಿ ಕಳೆದ ವಾರದ ಹಿಂದೆ ಅಷ್ಟೇ ದೇವರಾಜ್, ಪತ್ನಿ ತೇಜಳನ್ನು ಮನೆ ಸೇರಿಸಿಕೊಂಡಿದ್ದ. ಆದರೂ ಪತ್ನಿ ಮಾಡಿದ ಕೆಲಸದಿಂದ ದೇವರಾಜ್ಗೆ ಕುದಿಯುತ್ತಿತ್ತು. ಊರಿನಲ್ಲಿ ಮರ್ಯಾದೆ ಕಳೆದುಬಿಟ್ಟಳು ಎಂಬ ಸಿಟ್ಟಿನಲ್ಲಿದ್ದ. ಅದೇ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಮೊದಲೇ ಕೋಪದಲ್ಲಿದ್ದ ದೇವರಾಜ್, ಮಚ್ಚಿನಿಂದ ತೇಜಳ ಕತ್ತುಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.