ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಪ್ರಯಾಗ್ರಾಜ್ ನ ಗಂಗಾನದಿ ತಟದಲ್ಲಿ ನಡೆಯುತ್ತಿರುವ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳದಲ್ಲಿ ಸಾಧು–ಸಂತರು ಸೇರಿದಂತೆ ದೇಶ–ವಿದೇಶಗಳ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.
ಐಫೋನ್ ತಯಾರಿಸುವ ಅಮೆರಿಕದ ಆ್ಯಪಲ್ ಕಂಪನಿಯ ಸಂಸ್ಥಾಪಕರಾಗಿದ್ದ ದಿ. ಸ್ಟೀವ್ ಜಾಬ್ಸ್ ಪತ್ನಿ ಪೊವೆಲ್ ಜಾಬ್ಸ್ ಈ ಬಾರಿಯ ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ಆದರೆ, ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
‘ಪೊವೆಲ್ ಜಾಬ್ಸ್ ಇದುವರೆಗೆ ಇಷ್ಟು ದೊಡ್ಡ ಜನಸಂದಣಿಯನ್ನು ನೋಡಿರಲಿಲ್ಲ. ಸದ್ಯ ಅವರು ಅಲರ್ಜಿಯಿಂದ ಬಳಲುತ್ತಿದ್ದು, ಕ್ಯಾಂಪ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ’ ಎಂದು ನಿರಂಜನಿ ಆಖಾರದ ಮಹಾಮಂಡಳೇಶ್ವರದ ಸ್ವಾಮಿ ಕೈಲಾಸಾನಂದ ತಿಳಿಸಿದ್ದಾರೆ.
‘ಆರೋಗ್ಯ ಚೇತರಿಸಿಕೊಂಡ ಬಳಿಕ ಪೊವೆಲ್ ಜಾಬ್ಸ್ ಗೆ ಪ್ರತ್ಯೇಕವಾಗಿ ಸ್ನಾನ ಮಾಡಲು ವ್ಯವಸ್ಥೆ ಮಾಡುತ್ತೇವೆ’ ಎಂದು ಸ್ವಾಮೀಜಿಗಳು ಹೇಳಿದ್ದಾರೆ.
ಜ. 13ರಂದೇ ಪ್ರಯಾಗ್ ರಾಜ್ ಗೆ ಬಂದಿರುವ ಪೊವೆಲ್ ಜಾಬ್ಸ್ ಕ್ಯಾಂಪ್ ನಲ್ಲಿ ತಂಗಿದ್ದಾರೆ. ಮಹಾಕುಂಭದಲ್ಲಿ ಜ. 29ರವರೆಗೂ ಇರಲಿದ್ದಾರೆ ಎಂದು ವರದಿಯಾಗಿದೆ.
Click