ನ್ಯೂಸ್ ನಾಟೌಟ್ : ಇಲ್ಲೊಬ್ಬ ಆಸಾಮಿ ತನ್ನ ಗೆಳತಿಯನ್ನು ಮೆಚ್ಚಿಸಲು ದೊಡ್ಡದೊಂದು ಸಾಹಸಕ್ಕೆ ಕೈ ಹಾಕಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಆತ ಗರ್ಲ್ಫ್ರೆಂಡ್ ಅನ್ನು ‘ಇಂಪ್ರೆಸ್’ ಮಾಡುವ ಸಲುವಾಗಿ ಆಫ್ರಿಕನ್ ಸಿಂಹಗಳಿದ್ದ ಬೋನಿನೊಳಗೆ ಪ್ರವೇಶಿಸಿ ವಿಡಿಯೋ ಮಾಡಿದ್ದಾನೆ. ಆದರೆ ದುರಾದೃಷ್ಟವಾಶ್ ಸಿಂಹಗಳು ಆತನ ಮೇಲೆ ಅಟ್ಯಾಕ್ ಮಾಡಿವೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಡೈಲಿ ಮೇಲ್ ವರದಿಯ ಪ್ರಕಾರ, ಉಜ್ಬೇಕಿಸ್ತಾನದ ಪಾರ್ಕೆಂಟ್ನಲ್ಲಿ ಡಿಸೆಂಬರ್ 17 ರಂದು ಈ ಘಟನೆ ನಡೆದಿದ್ದು, ಸಿಂಹದ ಬೋನಿನೊಳಗೆ ನುಗ್ಗಿದ ವ್ಯಕ್ತಿಯೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಎಫ್ ಇರಿಸ್ಕುಲೋವ್ ಎಂಬ 44 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಇಂಪ್ರೆಸ್ ಮಾಡುವ ಸಲುವಾಗಿ ಮುಂಜಾನೆ 5 ಗಂಟೆಯ ಸುಮಾರಿಗೆ ಆಫ್ರಿಕನ್ ಸಿಂಹಗಳಿದ್ದ ಬೋನಿಗೆ ಪ್ರವೇಶಿಸಿ ವಿಡಿಯೋ ಮಾಡಲು ಮುಂದಾಗಿದ್ದಾನೆ. ಹೀಗೆ ವಿಡಿಯೋ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಆತನ ಮೇಲೆ ಸಿಂಹಗಳು ದಾಳಿ ಮಾಡಿ ಆತನನ್ನು ಬಾಗಶಃ ತಿಂದು ಹಾಕಿವೆ.
ಡಿಸೆಂಬರ್ 31 ರಂದು ಹಂಚಿಕೊಳ್ಳಲಾದ ವಿಡಿಯೋ ಈಗ ವೈರಲ್ ಆಗುತ್ತಿದೆ.
Click