ಹೆಬ್ಬಾಳ್ಕರ್‌ ಬೆನ್ನುಹುರಿಗೆ ಪೆಟ್ಟಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ ಎಂದ ವೈದ್ಯರು, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಇನ್ನು ಮೂರು ದಿನ ಮಹಿಳಾ ಮತ್ತು ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಾರು ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಚಿವರ ಆರೋಗ್ಯ ತಪಾಸಣೆ ಬಳಿಕ ಡಾ.ರವಿ ಪಾಟೀಲ್ ಪ್ರತಿಕ್ರಿಯಿಸಿ, 24 ಗಂಟೆಯಲ್ಲಿ ಹೆಬ್ಬಾಳ್ಕರ್‌ ಆರೋಗ್ಯ ಚೆನ್ನಾಗಿ ಚೇತರಿಕೆ ಕಂಡಿದೆ. ಸಚಿವರ ಬೆನ್ನುಹುರಿ ಪೆಟ್ಟಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಿದರು. ಹೆಬ್ಬಾಳ್ಕರ್‌ ಮತ್ತು ಸಹೋದರ ಚನ್ನರಾಜ್ ಇಬ್ಬರೂ ‘ಔಟ್ ಆಫ್ ಡೇಂಜರ್’ ಇದ್ದಾರೆ. ಅವರ ಗನ್ ಮ್ಯಾನ್, ಕಾರ್‌ ಚಾಲಕ ಸಹ ಆರೋಗ್ಯವಾಗಿದ್ದಾರೆ. ಸಚಿವರು ಒಂದು ವಾರ ವಿಶ್ರಾಂತಿ ಪಡೆಯಬೇಕು. ಚನ್ನರಾಜ್ ಅವರಿಗೂ ವಿಶ್ರಾಂತಿ ಪಡೆಯಲು ಸೂಚಿಸಿದ್ದೇವೆ. ಮಂಗಳವಾರ ಎಂಆರ್‌ಐ, ಎಕ್ಸ್‌ ರೇ ತೆಗೆಸಿ ತಪಾಸಣೆ ಮಾಡಿದ್ದೇವೆ. ಇಂದು ಅವರ ಅವರ ರಕ್ತವನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಸಚಿವರಿಗೆ ಹೈಪ್ರೋಟಿನ್ ಆಹಾರ ಸೇವಿಸಲು ಸಲಹೆ ಕೊಟ್ಟಿದ್ದೇವೆ. ಪನ್ನೀರ್‌, ಡ್ರೈ ಫ್ರೂಟ್ಸ್‌ ತೆಗೆದುಕೊಳ್ಳಲು ಹೇಳಿದ್ದೇವೆ ಎಂದಿದ್ದಾರೆ. Click