ನ್ಯೂಸ್ ನಾಟೌಟ್ : ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಶ್ರಯದಲ್ಲಿ ಎರಡು ದಿನಗಳ (ಜ. 03, 04 ) ಮೆಡಿಕಲ್ ಪ್ರೀಮಿಯರ್ ಲೀಗ್ ಪುರುಷರ ಕ್ರಿಕೆಟ್ ಹಾಗೂ ಮಹಿಳೆಯರ ಥ್ರೋ ಬಾಲ್ ಪಂದ್ಯಾಟಕ್ಕೆ ಶುಕ್ರವಾರ (ಜ. 03) ಎನ್. ಎಮ್. ಸಿ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ ) ಸುಳ್ಯ ಇದರ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಉದ್ಘಾಟಿಸಿ ಮಾತನಾಡಿ, ಕ್ರೀಡೆ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಬಹಳ ಸಹಾಯಕಾರಿ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಎಲ್ಲಾ ಸಹ ಸಂಸ್ಥೆಗಳು ಜೊತೆಯಾಗಿ ಸೇರಿ ಕ್ರಿಕೆಟ್ ಹಾಗೂ ಥ್ರೋ ಬಾಲ್ ಆಯೋಜನೆ ಮಾಡಿರುವುದು ಉತ್ತಮ ವಿಚಾರ. ದಿನನಿತ್ಯದ ವೃತ್ತಿ ಜೀವನದ ಒತ್ತಡದ ಮಧ್ಯೆ ಇಂತಹ ಕ್ರೀಡಾ ಕೂಟಗಳು ವ್ಯಕ್ತಿಯ ಆತ್ಮ ಸ್ಥೈರ್ಯ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎ. ಒ ಎಲ್. ಇ (ರಿ.) ಸುಳ್ಯ ಇದರ ಉಪಾಧ್ಯಕ್ಷೆ ಶೋಭಾ ಚಿದಾನಂದ, ಕಾಲೇಜಿನ ಡೀನ್ ಡಾ| ನೀಲಾಂಬಿಕೈ ನಟರಾಜನ್, ಕೆವಿಜಿ ಆಯುರ್ವೇದ ಮತ್ತು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ| ಲೀಲಾಧರ್ ಡಿ ವಿ, ಒ. ಬಿ ಜಿ ವಿಭಾಗ ಮುಖ್ಯಸ್ಥೆ ಡಾ| ಗೀತಾ ದೊಪ್ಪ, ಕೆವಿಜಿ ಕಾಲೇಜ್ ಆಫ್ ನರ್ಸಿಂಗ್ ನ ಪ್ರಾಂಶುಪಾಲೆ ಚಂದ್ರಾವತಿ, ಕೆವಿಜಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ ನ ಪ್ರಾಂಶುಪಾಲೆ ಪ್ರೇಮ ಬಿ ಎಮ್, ಫಿಸಿಯೋತೆರಪಿ ವಿಭಾಗದ ಪ್ರಾಂಶುಪಾಲ ಸಾಯಿರಾಮ್ ಹಾಗೂ ಎಲ್ಲಾ ತಂಡದ ಮುಖ್ಯಸ್ಥರು ಉಪಸ್ಥಿತರಿದ್ದರು. ಹಲವಾರು ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಉದ್ಯೋಗಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಕ್ರೀಡಾಂಗಣದಲ್ಲಿ ಡಾ| ಕೆ.ವಿ. ಚಿದಾನಂದ ಹಾಗೂ ಡಾ| ಲೀಲಾಧರ್ ಡಿ ವಿ ಬ್ಯಾಟಿಂಗ್ ಮಾಡುವುದರ ಮೂಲಕ ಉದ್ಘಾಟಿಸಿದರು.
ನರ್ಸಿಂಗ್ ಸೂಪರ್ ವೈಸರ್ ಪ್ರೇಮ ಪ್ರಾರ್ಥಿಸಿದರು. ಡಾ ಗೀತಾ ದೊಪ್ಪ ಸ್ವಾಗತಿಸಿದರು. ಶಶಿಕಾಂತ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕ್ರಿಕೆಟ್ ಹಾಗೂ ಥ್ರೋ ಬಾಲ್ ಪಂದ್ಯಾಟ ನಡೆಯಿತು. ಒಟ್ಟು 10 ಕ್ರಿಕೆಟ್ ತಂಡ ಹಾಗೂ 4 ಥ್ರೋ ಬಾಲ್ ತಂಡಗಳು ಭಾಗವಸಿವೆ ಪಂದ್ಯಾಟ ನಾಳೆಯೂ ಮುಂದುವರಿಯಲಿದೆ.