- +91 73497 60202
- [email protected]
- January 22, 2025 1:33 PM
ನ್ಯೂಸ್ ನಾಟೌಟ್: ಮರಿಯೊಂದಿಗಿದ್ದ ಕಾಡಾನೆಯೊಂದು ಕ್ಯಾಂಟೀನ್ ಮೇಲೆ ದಾಳಿ ಮಾಡಿದ ಘಟನೆ ಕೊಡಗಿನ ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿಯಲ್ಲಿ ಮಂಗಳವಾರ(ಜ.21) ಬೆಳಗ್ಗೆ ನಡೆದಿದೆ. ಕ್ಯಾಂಟೀನ್ ನಡೆಸುತ್ತಿದ್ದ ದಂಪತಿ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ನೆಲ್ಲಿಹುದಿಕೇರಿ ಸಮೀಪದ ಅತ್ತಿಮಂಗಲ ತೋಟದಿಂದ ಮರಿಯೊಂದಿಗೆ ರಸ್ತೆ ದಾಟುತ್ತಿದ್ದ ಕಾಡಾನೆ ಏಕಾಏಕಿ ಪಕ್ಕದಲ್ಲಿದ್ದ ಕ್ಯಾಂಟೀನ್ ಮೇಲೆ ದಾಳಿ ಮಾಡಿದೆ. ಕ್ಯಾಂಟೀನ್ ನಲ್ಲಿದ್ದ ವಸ್ತುಗಳು, ಪೀಠೋಪಕರಣಗಳು ಮತ್ತು ತಿಂಡಿ ತಿನಿಸುಗಳನ್ನು ಎಳೆದು ಬಿಸಾಡಿದ ಕಾಡಾನೆ ಪಕ್ಕದ ಬಸ್ ತಂಗುದಾಣದಲ್ಲಿದ್ದ ಗ್ರಾಮಸ್ಥರ ಕಿರುಚಾಟ ಕೇಳಿ ಅಲ್ಲಿಂದ ಕಾಲ್ಕಿತ್ತಿದೆ. ನಂತರ ನಲ್ವತ್ತೆಕ್ಕರೆ ಗ್ರಾಮದ ಮಾರ್ಗವಾಗಿ ಹೋದ ಕಾಡಾನೆ ಕಾರೊಂದರ ಮೇಲೂ ದಾಳಿ ನಡೆಸಲು ಯತ್ನಿಸಿದೆ ಎನ್ನಲಾಗಿದೆ. ಕ್ಯಾಂಟೀನ್ ನಲ್ಲಿದ್ದ ಜಬ್ಬಾರ್ ಹಾಗೂ ಅವರ ಪತ್ನಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಈ ಸಂದರ್ಭ ಜಬ್ಬಾರ್ ಗೆ ಸಣ್ಣಪುಟ್ಟ ಗಾಯಗಳಾಗಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ