ಹೊಲದಲ್ಲಿ ನಿಧಿ ಇದೆ ಹುಡುಕಿ ಕೊಡುವುದಾಗಿ ನಂಬಿಸಿ‌ 28 ಲಕ್ಷ ರೂ. ದೋಚಿದ್ದ ಆರೋಪಿ..! ಜಮೀನು ಮಾಲಿಕರನ್ನು ಆತ ನಂಬಿಸಿದ ಪ್ಲಾನ್ ಹೇಗಿತ್ತು..?

ನ್ಯೂಸ್ ನಾಟೌಟ್: ರಾಯಚೂರಿನ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಬಳಿಯ ಕೋಠಾ ಗ್ರಾಮದಲ್ಲಿ ನಿಧಿ ಹುಡುಕಿ ಕೊಡುವುದಾಗಿ ನಂಬಿಸಿ ರೂ. 28 ಲಕ್ಷ ಹಣ ಪಡೆದು ಪರಾರಿಯಾಗಿದ್ದ, ಆರೋಪಿಯನ್ನು ಹಟ್ಟಿ ಠಾಣೆಯ ಪೋಲೀಸರು ಬಂಧಿಸಿದ್ದಾರೆ. ಗಂಗಾವತಿ ತಾಲೂಕಿನ ಉಡುಕಲ್ಲು ಗ್ರಾಮದ ನಿವಾಸಿ ಶರಣಪ್ಪ ತಂದೆ ದುರುಗಪ್ಪ ( 42) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.ಆರೋಪಿ ಶರಣಪ್ಪ 2023ರ ಮೇ 22ರಂದು ಕೋಠ ಗ್ರಾಮದ ನಿವಾಸಿ‌ ಅಲ್ಲಾಸಾಬ್ ಎಂಬವರ ಹೊಲದಲ್ಲಿ ನಿಧಿ ಇದೆ. ಹುಡುಕಿ ಕೊಡುತ್ತೇನೆ ನನಗೆ ಮೊದಲು 28 ಲಕ್ಷ ರೂಪಾಯಿ ಕೊಡಬೇಕು ಎಂದು ಷರತ್ತು ಹಾಕಿದ್ದ, ಅದಕ್ಕೆ‌ ಒಪ್ಪಿದ ಅಲ್ಲಾಸಾಬ್ ಮುಂಗಡವಾಗಿ ಹಣ ನೀಡಿದ್ದರು ಎನ್ನಲಾಗಿದೆ. ಅದೇ ದಿನ ಅಂದರೆ ಮೇ 22ರಂದು ಮಧ್ಯರಾತ್ರಿ 1 ಗಂಟೆಗೆ ಅಲ್ಲಾಸಾಬ್ ಅವರನ್ನು ಹೊಲಕ್ಕೆ ಕರೆದುಕೊಂಡು‌ಹೋಗಿ ಪೂಜೆ ಮಾಡಿ ಗುದ್ದಲಿಯಿಂದ ತಾನೇ ಗುಂಡಿ ಅಗೆದಿದ್ದಾನೆ. ಅಲ್ಲಿ ತಾನೇ ಇಟ್ಟಿದ್ದ ಹಿತ್ತಾಳೆ ಕೊಡದಲ್ಲಿ ಬಂಗಾರವಿದೆ ಎಂದು ಚೀಲದಲ್ಲಿ ಕಟ್ಟಿ ನೀಡಿದ್ದಾನೆ. ಮನೆಗೆ ಹೋಗಿ ಪ್ರತಿನಿತ್ಯ 11 ತಿಂಗಳ ಕಾಲ ಇದಕ್ಕೆ ಪೂಜೆ ಮಾಡಬೇಕು. ನಂತರ ನಾನು ಮತ್ತೆ ನಿಮ್ಮ ಮನೆಗೆ ಬಂದು ಪೂಜೆ ಮಾಡಿ ಇದನ್ನು ಕಳಚಿ‌ಕೊಡುತ್ತೇನೆ ಅಲ್ಲಿಯವರೆಗೆ ನೋಡಬೇಡಿ ಎಂದು ರೂ.28 ಲಕ್ಷ ಹಣ ಪಡೆದು ಪರಾರಿಯಾಗಿದ್ದಾನೆ. ಆರೋಪಿಯ ಮಾತಿನಿಂತೆ 11 ತಿಂಗಳ ಕಾಲ ಅಲ್ಲಾಸಾಬ್ ಪೂಜೆ ಮಾಡಿದ್ದಾನೆ. 2025, ಜನವರಿ 5 ರಂದು ಹಿತ್ತಾಳೆ ಕೊಡದಲ್ಲಿ ಸುತ್ತಿಕೊಟ್ಟ ಚೀಲವನ್ನು ನೋಡಿದಾಗ ಬಂಗಾರದ ಬಣ್ಣ‌ ಬಳಿದ‌ ಪ್ಲೇಟ್ ಗಳು ಕಂಡು ಗಾಬರಿಯಾಗಿ‌‌ ತಾನು ಮೋಸ ಹೋಗಿದ್ದು ಅರಿವಾಗಿದೆ.ಹಣಕೊಟ್ಟು‌ ಮೋಸ‌ ಹೋದ ಅಲ್ಲಾಸಾಬ್, ಕಳೆದ ಜನವರಿ 20 ರಂದು ಹಟ್ಟಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈಗ ಆತನನ್ನು ಬಂಧಿಸಲಾಗಿದೆ. Click