ನ್ಯೂಸ್ ನಾಟೌಟ್: ಪೆರಾಜೆಯ ದೇವಸ್ಥಾನಕ್ಕೆ ಅನ್ಯಮತೀಯ ಮಾಲೀಕತ್ವದ ವ್ಯಕ್ತಿಯೊಬ್ಬರು ಶಾಮಿಯಾನ ಹಾಕಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕೆಲವರು ಹಿಂದೂ ಮುಖಂಡರು ಇದನ್ನು ಆಕ್ಷೇಪಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟವರು ಬದಲಿ ಶಾಮಿಯಾನ ಹಾಕುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೆರಾಜೆಯ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ಮತ್ತು ನೂತನ ರಾಜಗೋಪುರ ಉದ್ಘಾಟನೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಸುಳ್ಯದ ಶಾಮಿಯಾನ ಸಂಸ್ಥೆಯೊಂದಕ್ಕೆ ಶಾಮಿಯಾನ ಹಾಕುವಂತೆ ತಿಳಿಸಲಾಗಿತ್ತು. ಇದನ್ನು ಕೆಲವರು ಪ್ರಶ್ನಿಸಿದ್ದರ ಹಿನ್ನೆಲೆಯಲ್ಲಿ ಯಾವುದೇ ವಿವಾದಕ್ಕೆ ಕಾರಣವಾಗಬಾರದು ಎನ್ನುವ ಕಾರಣಕ್ಕೆ ಶಾಮಿಯಾನ ತೆರವು ಮಾಡಲು ನಿರ್ಧರಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.