- +91 73497 60202
- [email protected]
- January 22, 2025 7:31 PM
ನ್ಯೂಸ್ ನಾಟೌಟ್ : ಮಾಟಮಂತ್ರ ಮಾಡುತ್ತಿದ್ದಾರೆ ಎಂಬ ಶಂಕೆಯ ಮೇಲೆ 77 ವರ್ಷದ ಮಹಿಳೆಯನ್ನು ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿದ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಬಳಿಕ ಕಬ್ಬಿಣದ ರಾಡ್ ನಿಂದ ಹೊಡೆಯಲಾಗಿದೆ ಎಂದು ಪೊಲೀಸರು ಜ.18 ರಂದು ತಿಳಿಸಿದ್ದಾರೆ.ಡಿಸೆಂಬರ್ 30ರಂದು ಈ ಘಟನೆ ನಡೆದಿದ್ದರೂ ಈ ತಿಂಗಳ ಆರಂಭದಲ್ಲಿ ಪೊಲೀಸ್ ದೂರು ದಾಖಲಾಗಿದ್ದು, ಶುಕ್ರವಾರ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಹಲ್ಲೆಗೊಳಗಾದ ಮಹಿಳೆ ಚಿಕಲ್ದಾರಾ ತಾಲೂಕಿನ ರೆತ್ಯಾಖೇಡ ಗ್ರಾಮದ ನಿವಾಸಿ ಎಂದು ಪೊಲೀಸರು ಹೇಳಿದ್ದಾರೆ. ಡಿಸೆಂಬರ್ 30ರಂದು ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆಕೆಯ ನೆರೆಹೊರೆಯವರು ಆಕೆಯನ್ನು ಹಿಡಿದು ಆಕೆ ಮಾಟಮಂತ್ರ ಮಾಡುತ್ತಿದ್ದಾಳೆಂದು ಆರೋಪಿಸಿ ಕಟ್ಟಿಹಾಕಿದ್ದಾರೆ. ಬಳಿಕ, ಗ್ರಾಮಸ್ಥರು ಸಂತ್ರಸ್ತೆಯನ್ನು ಮರದ ಕೋಲಿನಿಂದ ಹೊಡೆದು, ಕಪಾಳಮೋಕ್ಷ ಮಾಡಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಕೆಯ ಕೈ ಮತ್ತು ಕಾಲುಗಳ ಮೇಲೆ ಬಿಸಿ ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಲಾಗಿದೆ. ದೂರಿನ ಪ್ರಕಾರ, ಆ ಮಹಿಳೆಗೆ ಮೂತ್ರ ಕುಡಿಯಲು ಮತ್ತು ನಾಯಿಯ ಮಲ ಸೇವಿಸಲು ಒತ್ತಾಯಿಸಲಾಯಿತು. ನಂತರ ಆಕೆಯ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಯಿತು. ಕೆಲಸಕ್ಕೆ ಹೋಗಿದ್ದ ಆ ಮಹಿಳೆಯ ಮಗ ಮತ್ತು ಸೊಸೆ ಮನೆಗೆ ಬಂದಾಗ ಈ ವಿಷಯ ಗೊತ್ತಾಯಿತು. ಈ ಬಗ್ಗೆ ಜನವರಿ 5ರಂದು ಪೊಲೀಸ್ ದೂರು ದಾಖಲಿಸಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ