- +91 73497 60202
- [email protected]
- January 9, 2025 10:05 AM
ಟಿಬೆಟ್-ನೇಪಾಳ ಗಡಿಯಲ್ಲಿ ಸರಣಿ ಭೂಕಂಪ, 30ಕ್ಕೂ ಹೆಚ್ಚು ಜನ ಸಾವು..! ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಕಂಪನ..!
ನ್ಯೂಸ್ ನಾಟೌಟ್: ಟಿಬೆಟ್-ನೇಪಾಳ ಗಡಿಯಲ್ಲಿ ಮಂಗಳವಾರ(ಜ.7) ಬೆಳಿಗ್ಗೆ ಸಂಭವಿಸಿದ 7.1 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 30 ಜನರು ಮೃತಪಟ್ಟಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಕ್ಸಿಜಾಂಗ್ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ 6.35ಕ್ಕೆ ಭೂಕಂಪ ಸಂಭವಿಸಿದ್ದು, ಭೂಕಂಪದ ಕೇಂದ್ರ ಬಿಂದು ಚೀನಾದ ಟಿಬೆಟ್ ನಲ್ಲಿದೆ. ನೇಪಾಳದ ಲೋಬುಚೆಯಿಂದ ಈಶಾನ್ಯಕ್ಕೆ ಸುಮಾರು 93 ಕಿಮೀ ದೂರದಲ್ಲಿದೆ ಎಂದು ಯುಎಸ್ ಝಿಯೋಲಾಜಿಕಲ್ ಸರ್ವೆ ತಿಳಿಸಿದೆ. ಭೂಕಂಪದ ತೀವ್ರತೆಗೆ ಹಲವಾರು ಕಟ್ಟಡಗಳು ಕುಸಿದಿದೆ. ಜನರು ಭಯಗೊಂಡು ತಮ್ಮ ಮನೆಗಳು ಮತ್ತು ಅಪಾರ್ಟ್ಮೆಂಟ್ ಗಳನ್ನು ಬಿಟ್ಟು ಹೊರ ಬಂದಿದ್ದಾರೆ. ಕ್ಸಿಜಾಂಗ್ ಪ್ರದೇಶದಲ್ಲಿ ಬೆಳಿಗ್ಗೆ 7.02ಕ್ಕೆ 4.7 ಮತ್ತು 7.07ಕ್ಕೆ 4.9 ತೀವ್ರತೆಯ ಎರಡು ಭೂಕಂಪನ ಮತ್ತೆ ಸಂಭವಿಸಿದೆ. ಭೂಕಂಪವು ಬಿಹಾರ ಮತ್ತು ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಕಂಪನವನ್ನು ಉಂಟುಮಾಡಿದೆ. 2015ರಲ್ಲಿ ನೇಪಾಳದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಘಟನೆಯಲ್ಲಿ ಸುಮಾರು 9,000 ಜನರು ಮೃತಪಟ್ಟಿದ್ದರು ಮತ್ತು 22,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ