ನ್ಯೂಸ್ ನಾಟೌಟ್: ಹೊಸ ವರ್ಷದ ಸುಸಂದರ್ಭದಲ್ಲಿ ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಪ್ರಶಂಸಿಸಲು ಬಯಸುತ್ತೇನೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ ಅಧ್ಯಕ್ಷರಾಗಿರುವ ಡಾ. ಕೆ.ವಿ ಚಿದಾನಂದ ತಿಳಿಸಿದ್ದಾರೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳ ಜೊತೆಗೂಡಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೊಸ ವರ್ಷಚಾರಣೆಯನ್ನು ಸಂಭ್ರಮಿಸಿ ಬಳಿಕ ಮಾತನಾಡಿದರು. ‘2024 ರಲ್ಲಿ ಸಂಸ್ಥೆಯು ದಾಖಲಿಸಿದ ಮೈಲಿಗಲ್ಲುಗಳನ್ನು ಮೆಲುಕು ಹಾಕುವುದರೊಂದಿಗೆ ಹೊಸ ವರ್ಷವು ಹೊಸ ಉತ್ಸಾಹ ಮತ್ತು ಭರವಸೆಯೊಂದಿಗೆ ಪ್ರಾರಂಭವಾಗಲಿ, ಹೊಸ ವರ್ಷದಲ್ಲಿ ಹೊಸ ಅವಕಾಶಗಳು, ಹೊಸ ಭರವಸೆಗಳು ಮತ್ತು ಯಶಸ್ಸು ನಿಮ್ಮದಾಗಲಿ ಎಂದು ಹಾರೈಸಿದರು. ಬಳಿಕ ಮಾತನಾಡಿದ ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್ ಅವರು ‘2024 ರಲ್ಲಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಬಹುಮುಖ್ಯ ಕಾರ್ಯಕ್ರಮಗಳು ಹಾಗೂ ಯೋಜನೆಗಳ ವರದಿಯನ್ನು ವಾಚಿಸಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭ ಎ.ಒ. ಎಲ್. ಇ ಉಪಾಧ್ಯಕ್ಷೆ ಶೋಭಾ ಚಿದಾನಂದ, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ಸಿ ರಾಮಚಂದ್ರ ಭಟ್, ಗೌರವ ಪ್ರಾಧ್ಯಾಪಕಿ ಡಾ ಶೀಲಾ ಜಿ ನಾಯಕ್ ಹಾಗೂ ಎಲ್ಲಾ ವಿಭಾಗ ಮುಖ್ಯಸ್ಥರು. ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Click