ಬ್ರೇಕ್ ಫೇಲ್ ಆಗಿ ತಡೆಗೋಡೆಗೆ ಗುದ್ದಿದ KSRTC ಬಸ್, 70ಕ್ಕೂ ಅಧಿಕ ಪ್ರಯಾಣಿಕರು ಪಾರು..!

ನ್ಯೂಸ್ ನಾಟೌಟ್: ಬ್ರೇಕ್ ಫೇಲ್ ಆಗಿ ರಸ್ತೆಯ ತಡೆಗೋಡೆಗೆ ಕೆ.ಎಸ್‌.ಆರ್‌.ಟಿ.ಸಿ ಬಸ್ ಡಿಕ್ಕಿಯಾಗಿ ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರಾದ ಘಟನೆ ರಾಮನಗರದ ಕನಕಪುರ ತಾಲೂಕಿನ ಸಂಗಮದ ರಸ್ತೆಯಲ್ಲಿ ನಡೆದಿದೆ. ಕನಕಪುರದಿಂದ ಸಂಗಮದ ಕಡೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್, ಸಂಗಮ ಸಮೀಪದ ತಿರುವಿನ ರಸ್ತೆಯಲ್ಲಿ ಬ್ರೇಕ್ ಫೇಲ್ ಆಗಿದೆ. ಬಸ್ ನಿಯಂತ್ರಣಕ್ಕೆ ತರಲು ಚಾಲಕ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆಸಿದ ಬಳಿಕ ಬಸ್ ನಿಂತಿದೆ. ತಡೆಗೋಡೆ ಗಟ್ಟಿ ಇರದಿದ್ದರೆ ಪ್ರಪಾತಕ್ಕೆ ಬಸ್ ಉರುಳಿ ಬಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಬಸ್‌ ನಲ್ಲಿ ಸುಮಾರು 70ಕ್ಕೂ ಅಧಿಕ ಪ್ರಯಾಣಿಕರು ಹೊಸ ವರ್ಷ ಹಿನ್ನೆಲೆ ಸಂಗಮದ ಶಿವನ ದೇವಾಲಯಕ್ಕೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಇನ್ನೂ ಸ್ಥಳಕ್ಕೆ ಸಾತನೂರು ಪೊಲೀಸರು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Click