- +91 73497 60202
- [email protected]
- January 10, 2025 9:40 AM
ಜನವರಿ 20 ರ ಬಳಿಕ ಮದ್ಯದ ದರಗಳಲ್ಲಿ ಏರಿಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ
ನ್ಯೂಸ್ ನಾಟೌಟ್ : ಮದ್ಯಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಬಜೆಟ್ ಗೆ ಮೊದಲೇ ಮದ್ಯದ ದರ ಏರಿಕೆಯಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.ಸಾಧಾರಣವಾಗಿ ಬಜೆಟ್ ನಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ಹಾಕಲಾಗುತ್ತದೆ. ಆದರೆ ಈ ಬಾರಿ ಬಜೆಟ್ ಮಂಡನೆಯಾಗುವ ಮೊದಲೇ ದರ ಏರಲಿದೆ. ಜನವರಿ 20 ರಿಂದಲೇ ಕೆಲ ಬಿಯರ್ ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಶೀಘ್ರವೇ ದರ ಏರಿಕೆಯ ಬಗ್ಗೆ ಅಬಾಕರಿ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ. ಕನಿಷ್ಠ 10 ರಿಂದ 45 ರೂ. ದರ ಏರಿಕೆಯಾಗಲಿದೆ. ಲೆಜೆಂಡ್ – 145(100 ಹಳೇಯ ದರ), ಪವರ್ ಕೂಲ್ -155(130 ಹಳೇಯ ದರ) , ಬ್ಲ್ಯಾಕ್ ಫೋರ್ಟ್ -160(145 ಹಳೇಯ ದರ), ಹಂಟರ್ -190 (180 ಹಳೇಯ ದರ), ವುಡ್‌ಪೆಕರ್ ಕ್ರೆಸ್ಟ್ – 250(240 ಹಳೇಯ ದರ) ,ವುಡ್‌ಪೆಕರ್ ಗ್ಲೈಡ್ -240(230 ಹಳೇಯ ದರ) ದುಬಾರಿ ಬೆಲೆಯ ಬಿಯರ್ ದರ ಏರಿಕೆಯಾಗುವುದಿಲ್ಲ. ಬದಲಾಗಿ 300 ರೂ. ಒಳಗಡೆ ಇರುವ ಮದ್ಯದ ಏರಿಸಲು ಅಬಕಾರಿ ಇಲಾಖೆ ಸಿದ್ಧತೆ ನಡೆಸಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ