- +91 73497 60202
- [email protected]
- January 8, 2025 6:19 AM
ನ್ಯೂಸ್ ನಾಟೌಟ್ : ಭಾರತದ ಅಣು ಪರೀಕ್ಷೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದ ದಿಗ್ಗಜ ನ್ಯೂಕ್ಲಿಯರ್ ವಿಜ್ಞಾನಿ ಡಾ ಆರ್ ಚಿದಂಬರಂ (88) ಅವರು ಶನಿವಾರ ಬೆಳಿಗ್ಗೆ ನಿಧನರಾದರು. ಪೋಖ್ರಾನ್‌ನಲ್ಲಿ 1974 ಹಾಗೂ 1998ರಲ್ಲಿ ನಡೆಸಲಾದ ಭಾರತದ ಪರಮಾಣು ಸ್ಫೋಟ ಪರೀಕ್ಷೆಗಳಲ್ಲಿ ಚಿದಂಬರಂ ಅವರು ಪ್ರಧಾನ ಪಾತ್ರ ವಹಿಸಿದ್ದರು. ಅಣ್ವಸ್ತ್ರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಅವರು, ಮುಂಬಯಿಯ ಜಸ್ಲೋಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಆಟೋಮಿಕ್ ಎನರ್ಜಿ ಇಲಾಖೆ (ಡಿಎಇ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದ ಆಟೋಮಿಕ್ ಎನರ್ಜಿ ಕಮಿಷನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಭಾರತ ಸರ್ಕಾರಕ್ಕೆ ಪ್ರಧಾನ ವೈಜ್ಞಾನಿಕ ಸಲಹೆಗಾರರೂ ಆಗಿದ್ದರು. ಭಾರತವನ್ನು ಅಣ್ವಸ್ತ್ರ ದೇಶವನ್ನಾಗಿಸುವಲ್ಲಿ ಗಣನೀಯ ಕೊಡುಗೆ ನೀಡಿದ ಅವರಿಗೆ ಪದ್ಮ ವಿಭೂಷಣ ಪುರಸ್ಕಾರ ಒಲಿದಿತ್ತು. “ಖ್ಯಾತ ಭೌತ ವಿಜ್ಞಾನಿ ಮತ್ತು ಭಾರತದ ಅತ್ಯಂತ ಯಶಸ್ವಿ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ ರಾಜಗೋಪಾಲ ಚಿದಂಬರಂ ಅವರು ಜ. 4ರ ಬೆಳಿಗ್ಗೆ 3.20ಕ್ಕೆ ನಿಧನರಾದರು. ಭಾರತದ ವೈಜ್ಞಾನಿಕ ಹಾಗೂ ವ್ಯೂಹಾತ್ಮಕ ಸಾಮರ್ಥ್ಯಗಳಿಗೆ ಡಾ ಚಿದಂಬರಂ ಅವರ ಅಸಾಧಾರಣ ಕೊಡುಗೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ದೂರದೃಷ್ಟಿಯ ನಾಯಕತ್ವವನ್ನು ಸದಾ ಸ್ಮರಿಸಲಾಗುತ್ತದೆ” ಎಂದು ಡಿಎಇ ಹೇಳಿಕೆ ಬಿಡುಗಡೆ ಮಾಡಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ