ಹೊಸ ವರ್ಷದಲ್ಲಿ ಚಿತ್ರರಂಗಕ್ಕೆ ದರ್ಶನ್ ಮರು ಎಂಟ್ರಿ..! ಇಂದು(ಜ.1) ‘ಡೆವಿಲ್‌’ ಸಿನಿಮಾದ ಡಬ್ಬಿಂಗ್‌..!

ನ್ಯೂಸ್ ನಾಟೌಟ್ : ಚಿತ್ರದುರ್ಗದ ರೇಣುಕಸ್ವಾಮಿ ಪ್ರಕರಣದಲ್ಲಿ ಬಂಧಿತನಾಗಿ 6 ತಿಂಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್‌ 2025ರ ಹೊಸ ವರ್ಷದ ಮೊದಲ ದಿನ ಸಿನಿಮಾ ಕೆಲಸಕ್ಕೆ ಮುಹೂರ್ತ ಇಟ್ಟಿದ್ದಾರೆ. ಡಬ್ಬಿಂಗ್‌ ಮಾಡುವ ಮೂಲಕ “ಡೆವಿಲ್‌” ಸಿನಿಮಾದ ಶೂಟಿಂಗ್ ಮರು ಆರಂಭಿಸಿದ್ದಾರೆ. ಡೆವಿಲ್‌ ಚಿತ್ರಕ್ಕೆ 1 ಗಂಟೆ ಕಾಲ ಡಬ್ಬಿಂಗ್‌ ಮಾಡಿದ್ದಾರೆ. ಈಗಾಗಲೇ ‘ಡೆವಿಲ್‌’ ಚಿತ್ರದ ಒಂದಷ್ಟು ಚಿತ್ರೀಕರಣ ಪೂರೈಸಿದೆ. ಈಗ ಅಲ್ಲಿನ ದೃಶ್ಯಗಳಿಗೆ ದರ್ಶನ್‌ ಡಬ್ಬಿಂಗ್‌ ಮಾಡಲಿದ್ದಾರೆ. ನಗರದ ಸ್ಟುಡಿಯೋವೊಂದರಲ್ಲಿ ಸುಮಾರು 1 ಗಂಟೆ ಕಾಲ ಡಬ್ಬಿಂಗ್‌ ಮಾಡಿ ಸಿನಿಮಾ ಕೆಲಸಕ್ಕೆ ಹೊಸ ವರ್ಷದಲ್ಲಿ ಚಾಲನೆ ನೀಡಲಿದ್ದಾರೆ. ಫೆ.22ರ ನಂತರ ದರ್ಶನ್‌ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಮಿಲನ ಪ್ರಕಾಶ್‌ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಶೇ.50ರಷ್ಟು ಚಿತ್ರೀಕರಣ ಪೂರೈಸಿದೆ. “ಕಾಟೇರ’ದ ಯಶಸ್ಸಿನ ನಂತರ ಬರುತ್ತಿರುವ ಸಿನಿಮಾ ಇದಾಗಿರುವುದರಿಂದ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. Click