70ಕ್ಕೂ ಹೆಚ್ಚು ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ..! ತಾಂತ್ರಿಕ ತಜ್ಞರಿಂದ ತನಿಖೆ..!

ನ್ಯೂಸ್ ನಾಟೌಟ್: ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಬುಧವಾರ(ಜ.8) ಸಂಜೆ ಜೈಲು ಅಧಿಕಾರಿಯ ಕಣ್ಣಿಗೆ ಚೀನಾ ನಿರ್ಮಿತ ಡ್ರೋನ್ ಬಿದ್ದಿದ್ದು ಆದರೆ ಡ್ರೋನ್ ಎಲ್ಲಿಂದ ಬಂತು ಹೇಗೆ ಬಂತು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಧಿಕಾರಿಗಳ ಆರಂಭಿಕ ತನಿಖೆಯಲ್ಲಿ ಚೀನಾದ ನಿರ್ಮಿತ ಡ್ರೋನ್ ಎಂದು ಕಂಡುಬಂದಿದೆ, ಜೊತೆಗೆ ಇದು ಎರಡು ಮಸೂರಗಳನ್ನು ಹೊಂದಿದೆ ಎನ್ನಲಾಗಿದೆ. ಸದ್ಯ ಗಾಂಧಿನಗರ ಪೊಲೀಸರ ತಾಂತ್ರಿಕ ತಜ್ಞರ ತಂಡ ಡ್ರೋನ್‌ ನ ತನಿಖೆ ನಡೆಸುತ್ತಿದೆ. ಸಂಪೂರ್ಣ ತನಿಖೆಯ ನಂತರವಷ್ಟೇ ವಿಷಯ ಬಹಿರಂಗಗೊಳ್ಳಲಿದೆ. ಭೋಪಾಲ್‌ ನ ಕೇಂದ್ರ ಕಾರಾಗೃಹವನ್ನು ದೇಶದ ಸೂಕ್ಷ್ಮ ಜೈಲುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಯಾಕೆಂದರೆ ಈ ಕಾರಾಗೃಹದಲ್ಲಿ ಎಪ್ಪತ್ತಕ್ಕೂ ಹೆಚ್ಚು ಉಗ್ರರನ್ನು ಇರಿಸಲಾಗಿದ್ದು ಜೊತೆಗೆ ಹೆಚ್ಚಿನ ಭದ್ರತೆಯನ್ನೂ ಒದಗಿಸಲಾಗಿದೆ. ಹೀಗಿದ್ದರೂ ಹೈ ಸೆಕ್ಯೂರಿಟಿ ಇರುವ ಜೈಲಿನ ಬಳಿ ಡ್ರೋನ್ ಹೇಗೆ ಬಂತೆಂಬುದೇ ಕುತೂಹಲ ಮೂಡಿಸಿದೆ. Click