ನ್ಯೂಸ್ ನಾಟೌಟ್: ಬಿ.ಇಡಿ ಓದಲು ಕಾಲೇಜು ಸೇರಿದ್ದ ವಿದ್ಯಾರ್ಥಿನಿ, ಉಪನ್ಯಾಸಕನ ಜತೆ ಓಡಿಹೋಗಿ ಮದುವೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.
ಎಂಎ ಮುಗಿಸಿದ್ದ ಹುಣಸೂರಿನ ಪೂರ್ಣಿಮಾ (24), ಬಿ.ಇಡಿ ಮಾಡಲು ಹುಣಸೂರಿನ ಮಹಾವೀರ್ ಕಾಲೇಜ್ ಆಫ್ ಎಜುಕೇಷನ್ ಗೆ ಸೇರಿಕೊಂಡಿದ್ದಳು. ಅದೇ ಕಾಲೇಜಿನ ಉಪನ್ಯಾಸಕ ಯಶೋಧಕುಮಾರ್ (39), ಪೂರ್ಣಿಮಾಗಿಂತ 15 ವರ್ಷಗಳಷ್ಟು ಹಿರಿಯರ ಜೊತೆ ಪರಾರಿಯಾಗಿದ್ದಳು. ಈ ಹಿಂದೆ ಇವರಿಬ್ಬರ ಪ್ರೇಮಕ್ಕೆ ಮನೆಯವರಿಂದ ವಿರೋಧ ವ್ಯಕ್ತವಾಗಿದ್ದು, ಆಕೆಯನ್ನು ಕಾಲೇಜು ಬಿಡಿಸಿದ್ದರು ಎನ್ನಲಾಗಿದೆ.
ಬಳಿಕ, ಮೊಬೈಲ್ ನಲ್ಲೇ ಇವರಿಬ್ಬರ ಪ್ರೇಮ ಮುಂದುವರಿದಿತ್ತು. ಕಾಲೇಜಿನಿಂದ ಸರ್ಟಿಫಿಕೇಟ್ ತರಬೇಕೆಂದು ಹೋದ ಪೂರ್ಣಿಮಾ, ಯಶೋದ ಕುಮಾರ್ ಜೊತೆ ಓಡಿ ಹೋಗಿ, ಮದುವೆಯಾಗಿದ್ದಾಳೆ. ಬಳಿಕ, ಮೆಸೇಜ್ ಮಾಡಿ, ಮದುವೆಯಾಗಿದೆ ಎಂದು ತಿಳಿಸಿದ್ದಾಳೆ. ವಿಷಯ ತಿಳಿದ ಆಕೆಯ ತಂದೆ ಹಾಸಿಗೆ ಹಿಡಿದಿದ್ದಾರೆ. ಸೊಪ್ಪು ಮಾರಿ 2 ಲಕ್ಷ ಸಾಲ ಮಾಡಿ ಆಕೆಯನ್ನು ಓದಿಸಿದ್ದರು ಎಂದು ಪೋಷಕರು ಹೇಳಿಕೊಂಡಿದ್ದಾರೆ.
Click