ಮಲಯಾಳಂನ ಖ್ಯಾತ ನಟಿಗೆ ಅವಹೇಳನಕಾರಿ ಟೀಕೆ..! ಉದ್ಯಮಿ ಪೊಲೀಸ್ ವಶಕ್ಕೆ

ನ್ಯೂಸ್ ನಾಟೌಟ್ : ಮಲಯಾಳಂ ನಟಿ ಹನಿ ರೋಸ್ ವಿರುದ್ಧ ಅವಹೇಳನಕಾರಿ ಟೀಕೆ ಆರೋಪಕ್ಕೆ ಸಂಬಂಧಿಸಿ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರು ಎಂಬವರನ್ನು ಬುಧವಾರ(ಜ.8) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಯನಾಡಿನ ಮೆಪ್ಪಾಡಿಯಲ್ಲಿರುವ ಬೋಚೆ ರೆಸಾರ್ಟ್ ನಿಂದ ಬಾಬಿ ಚೆಮ್ಮನೂರು ಎಂಬ ಉದ್ಯಮಿಯನ್ನು ವಶಕ್ಕೆ ಪಡೆಯಲಾಗಿದೆ. ನಟಿ ಹನಿ ರೋಸ್ ಅವರ ದೂರಿನ ಮೇರೆಗೆ ಬಾಬಿ ಚೆಮ್ಮನೂರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75(4) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 67ರಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಾಬಿ ಚೆಮ್ಮನೂರ್ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತನ್ನ ವಿರುದ್ಧ ಅವಹೇಳನಾಕಾರಿ ಟೀಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ನಟಿ ದೂರು ನೀಡಿದ್ದರು. Click