ನ್ಯೂಸ್ ನಾಟೌಟ್: ಶಬ್ಧ ಮಾಲಿನ್ಯವನ್ನು ಉಂಟು ಮಾಡುವ ಕರ್ಕಶ ಹಾರ್ನ್ಗಳನ್ನೇ ಕೆಲ ಚಾಲಕರು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳುತ್ತಾರೆ. ಇದು ಶಬ್ಧ ಮಾಲಿನ್ಯವನ್ನು ಉಂಟು ಮಾಡುವುದು ಮಾತ್ರವಲ್ಲದೆ ಸಾರ್ವಜನಿಕರಿಗೆ ಕಿರಿಕಿರಿಯನ್ನು ಸಹ ಉಂಟು ಮಾಡುತ್ತದೆ. ಇಲ್ಲೊಬ್ರು ಟ್ರಾಫಿಕ್ ಪೊಲೀಸ್ ವಿನೂತನ ಪ್ರಯತ್ನವೊಂದನ್ನು ಮಾಡಿದ್ದು, ಕರ್ಕಶ ಹಾರ್ನ್ ಹಾಕಿ ತೊಂದರೆ ನೀಡುವ ಚಾಲಕರಿಗೆ ಅದೇ ಹಾರ್ನ್ ಸದ್ದನ್ನು ಕೇಳಿಸುವ ಮೂಲಕ ವಿನೂತನ ಶಿಕ್ಷೆ ನೀಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಶಿವಮೊಗ್ಗದ ಟ್ರಾಫಿಕ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕರ್ಕಶ ಹಾರ್ನ್ ಹಾಕುವ ವಾಹನ ಚಾಲಕರಿಗೆ ಈ ವಿನೂತನ ಶಿಕ್ಷೆಯನ್ನು ನೀಡಿದ್ದಾರೆ. ಭಾನುವಾರ (ಜನವರಿ 19) ಪಿಎಸ್ಐ ತಿರುಮಲೇಶ್ ಕರ್ಕಶ ಹಾರ್ನ್ ಹಾಕುವ ವಾಹನ ಚಾಲಕರನ್ನು ತಡೆದು ನಿಲ್ಲಿಸಿ, ಅದೇ ವಾಹನದ ಹಾರ್ನ್ ಸದ್ದನ್ನು ಅವರಿಗೆ ಕೇಳಿಸುವ ಮೂಲಕ ವಿನೂತನ ಶಿಕ್ಷೆ ನೀಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕರ್ಕಶ ಹಾರ್ನ್ ಹಾಕುವಂತಹ ಚಾಲಕರನ್ನು ಗಾಡಿಯಿಂದ ಕೆಳಗಿಳಿಸಿ, ಅದೇ ಹಾರ್ನ್ ಸದ್ದನ್ನು ಅವರಿಗೆ ಕೇಳಿಸುವ ಮೂಲಕ, ಕಿರಿಕಿರಿ ಆಗ್ತಿದೆ ಅಲ್ವಾ, ಮತ್ತೆ ಯಾಕೆ ಈ ಹಾರ್ನ್ ಬೇಕಿತ್ತು ಎಂದು ವಿನೂತನ ರೀತಿಯಲ್ಲಿ ಶಿಕ್ಷೆ ನೀಡಿದಂತಹ ದೃಶ್ಯವನ್ನು ಕಾಣಬಹುದು.
Click