ಜ.19ರ ಬಳಿಕ ಅಮೆರಿಕದಲ್ಲೂ’ಟಿಕ್‌ ಟಾಕ್’ ಬ್ಯಾನ್..! ಚೀನಾ ಸರ್ಕಾರಕ್ಕಾಗಿ ಗುಪ್ತಚರ ಕೆಲಸ ಮಾಡಲು ಟಿಕ್‌ ಟಾಕ್ ಬಳಕೆ ಆರೋಪ..!

ನ್ಯೂಸ್ ನಾಟೌಟ್: ಅಮೆರಿಕ ಚೀನಾದ ಖ್ಯಾತ ಮನೋರಂಜನಾ ಆ್ಯಪ್ ಅನ್ನು ನಿಷೇಧಿಸಲು ಮುಂದಾಗಿದೆ. ರಾಷ್ಟ್ರದ ಭದ್ರತೆ ವಿಷಯವನ್ನು ಮುಂದಿಟ್ಟುಕೊಂಡು ಟಿಕ್‌ ಟಾಕ್ (TikTok) ನಿಷೇಧಿಸಿದ್ದ ಸರ್ಕಾರದ ಕ್ರಮವನ್ನು ಯುಎಸ್ ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿಯಲು ಒಲವು ತೋರಿತ್ತು. ಇದರ ಬೆನ್ನಲ್ಲೇ ಚೀನಾ ಮೂಲದ ‘ಟಿಕ್‌ ಟಾಕ್’ ಭಾನುವಾರ (ಜ.19)ದಿಂದ ಅಮೆರಿಕದಲ್ಲಿ ಸ್ಥಗಿತಗೊಳ್ಳಲಿದೆ. ಸದ್ಯ ಇನ್‌ ಸ್ಟಾಲ್ ಆಗಿರುವ ‘ಟಿಕ್‌ಟಾಕ್’ ಆಪ್ ಕೂಡ ನಿಷ್ಕ್ರೀಯಗೊಳ್ಳಲಿದೆ ಎಂದು ವರದಿ ತಿಳಿಸಿದೆ. 2019 ರ ಏಪ್ರಿಲ್ 17 ರಂದು ಭಾರತವೂ ಟಿಕ್ ಟಾಕ್ ಆ್ಯಪ್ ಅನ್ನು ನಿಷೇಧಿಸಿತ್ತು. ನಿಷೇಧದ ಕುರಿತು ಯುಎಸ್ ಸರ್ವೋಚ್ಚ ನ್ಯಾಯಾಲಯವು ಚರ್ಚಿಸುತ್ತಿದ್ದಂತೆ, ಭಾನುವಾರ (ಜ.19)ದಿಂದ ಟಿಕ್‌ಟಾಕ್‌ ಅಮೆರಿಕದಲ್ಲಿ ಸ್ಥಗಿತಗೊಳ್ಳಲಿದೆ. ಟಿಕ್‌ ಟಾಕ್ ಅಮೆರಿಕದಲ್ಲಿ Appleನ ಆಪ್ ಸ್ಟೋರ್‌ ನಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಉಚಿತ ಅಪ್ಲಿಕೇಶನ್ ಎನ್ನಲಾಗಿದೆ. ಚೀನಾ ಸರ್ಕಾರಕ್ಕಾಗಿ ಗುಪ್ತಚರ ಕೆಲಸ ಮಾಡಲು ಟಿಕ್‌ ಟಾಕ್ ಬಳಕೆ ಮಾಡಲು ಅವಕಾಶ ಮಾಡುವುದಿಲ್ಲ ಎಂದು ಯುಎಸ್ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬಟ್ರ್ಸ್ ಹೇಳಿದ್ದರು. ಕಳೆದ ವರ್ಷ ಕಾಂಗ್ರೆಸ್ ಅಂಗೀಕರಿಸಿದ ಮತ್ತು ನಿರ್ಗಮಿತ ಡೆಮಾಕ್ರಟಿಕ್ ಅಧ್ಯಕ್ಷ ಜೋ ಬೈಡೆನ್ ಸಹಿ ಮಾಡಿದ ಕಾನೂನನ್ನು ತಡೆಯಲು ಕಂಪನಿಗಳು ಮತ್ತು ಬಳಕೆದಾರರು ಮೊಕದ್ದಮೆ ಹೂಡಿದ್ದರು. ಆದರೆ, ಸರ್ಕಾರದ ನಿರ್ಧಾರವನ್ನು ಯುಎಸ್ ಸರ್ವೋಚ್ಚ ನ್ಯಾಯಾಲಯ ಮಾನ್ಯ ಮಾಡಿದೆ. Click