ನ್ಯೂಸ್ ನಾಟೌಟ್: ಜೈಲರ್ ಖಳನಟ ವಿನಾಯಕನ್ ಸಾರ್ವಜನಿಕವಾಗಿ ತಮ್ಮ ಅಶಿಸ್ತಿನ ವರ್ತನೆಯಿಂದಾಗಿ ಆಗಾಗ್ಗೆ ವಿವಾದಗಳನ್ನು ಎದುರಿಸುತ್ತಿದ್ದರು. ಕುಡಿದ ಮತ್ತಿನಲ್ಲಿ ಆಗಾಗ್ಗೆ ಸರ್ಕಾರಿ ಅಧಿಕಾರಿಗಳೂ ಸೇರಿದಂತೆ ಜನರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಘಟನೆಗಳು ವರದಿಯಾಗಿತ್ತು. ಇತ್ತೀಚೆಗೆ, ಜೈಲರ್ ನಟನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ತಮ್ಮ ನೆರೆಹೊರೆಯವರೊಂದಿಗೆ ಜಗಳವಾಡುತ್ತಿರುವುದು ಕಂಡುಬಂದಿದೆ.
ಈ ವಿಡಿಯೋದಲ್ಲಿ, ವಿನಾಯಕನ್ ತುಂಡು ಬಟ್ಟೆ ಧರಿಸಿ ಬಾಲ್ಕನಿಯಲ್ಲಿ ನಿಂತು ನಿಂದಿಸುತ್ತಿರುವುದನ್ನು ಕಾಣಬಹುದು. ನೆರೆಮನೆಯವರಿಗೆ ಬೈಯುತ್ತಾ, ಅಶ್ಲೀಲವಾಗಿ ನಡೆದುಕೊಂಡಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಅದನ್ನು ವಿನಾಯಕನ್ ಕೂಡ ಒಪ್ಪಿಕೊಂಡಿದ್ದಾರೆ. ವಿನಾಯಕನ್ ಅವಾಚ್ಯ ಪದಗಳಿಂದ ನೆರೆಮನೆಯವರನ್ನು ನಿಂದಿಸಿದ್ದಾನೆ. ಲುಂಗಿ ಧರಿಸಿ ಜಗಳಕ್ಕೆ ಬಂದಿದ್ದ ನಟನಿಗೆ ಸರಿಯಾಗಿ ನಿಂತುಕೊಳ್ಳಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಸೊಂಟದ ಮೇಲಿದ್ದ ಲುಂಗಿ ಉದುರಿ ಹೋದರೂ ಅದರ ಅರಿವಿಲ್ಲದೆ ಜಗಳವಾಡಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ನಟನಿಗೆ ಛೀಮಾರಿ ಹಾಕುತ್ತಿದ್ದಾರೆ. ಇನ್ನು ತನ್ನ ವರ್ತನೆಗೆ ನಟ ಕ್ಷಮೆಯಾಚಿಸಿದ್ದಾರೆ. ನನ್ನಿಂದ ತಪ್ಪಾಗಿದೆ ಹೀಗಾಗಿ ಜನರ ಬಳಿ ಕ್ಷಮೆ ಕೇಳುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ವಿನಾಯಕನ್ ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸಿ ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆ, ಗೋವಾದಲ್ಲಿ ಅಂಗಡಿಯವನೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೋ ವೈರಲ್ ಆದ ನಂತರ ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು.
Click