ನ್ಯೂಸ್ ನಾಟೌಟ್ :ಇಸ್ಕಾನ್ ದೇವಸ್ಥಾನದ ಉದ್ಯೋಗಿಯೊಬ್ಬ ದೇವಾಲಯಕ್ಕೆ ಬಂದಿದ್ದ ಭಕ್ತರು ನೀಡಿದ್ದ ಲಕ್ಷಗಟ್ಟಲೇ ರೂಪಾಯಿ ಮೌಲ್ಯದ ದೇಣಿಗೆ ಹಣ ಮತ್ತು ರಶೀದಿ ಪುಸ್ತಕದೊಂದಿಗೆ ಪರಾರಿಯಾದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ವರದಿಯಾಗಿದೆ.
ಶುಕ್ರವಾರ (ಜ.03) ತಡರಾತ್ರಿ ದೇವಸ್ಥಾನದ ಮುಖ್ಯ ಲೆಕ್ಕಾಧಿಕಾರಿ ವಿಶ್ವ ನಾಮ ದಾಸ್ ಪೊಲೀಸರಿಗೆ ಎಫ್ ಐಆರ್ ದಾಖಲಿಸಿದ ಬಳಿಕ ಉದ್ಯೋಗಿಯಿಂದ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನದ ಮುಖ್ಯ ಹಣಕಾಸು ಅಧಿಕಾರಿ ವಿಶ್ವ ನಾಮ ದಾಸ್ ಎಂಬವರು ಆರೋಪಿ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ದೇವಸ್ಥಾನದ ವಕ್ತಾರ ರವಿ ಲೋಚನ್ ದಾಸ್ ಕೊಟ್ಟ ಮಾಹಿತಿ ಪ್ರಕಾರ, ನಾಪತ್ತೆಯಾಗಿರುವ ಉದ್ಯೋಗಿ ಮುರಳೀಧರ್ ದಾಸ್, ಇಸ್ಕಾನ್ ದೇವಸ್ಥಾನದಲ್ಲಿ ದೇಣಿಗೆ ಸಂಗ್ರಹಿಸುವ ಮತ್ತು ಠೇವಣಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದ್ದರು. ಲಕ್ಷ ಲಕ್ಷ ಹಣದ ಜತೆಗೆ 32 ಹಾಳೆಗಳಿದ್ದ ರಶೀದಿ ಪುಸ್ತಕವನ್ನು ಸಹ ಕದ್ದೊಯ್ದಿದ್ದಾರೆ ಎಂದು ಆರೋಪಿದ್ದಾರೆ.
ನಿಮಾಯ್ ಚಂದ್ ಯಾದವ್ ಅವರ ಪುತ್ರ ಮುರಳೀಧರ್ ದಾಸ್ ಮಧ್ಯಪ್ರದೇಶದ ಇಂದೋರ್ ನಿಂದ ಬಂದವರು ಎಂದು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ FIRನಲ್ಲಿ ತಿಳಿಸಲಾಗಿದೆ. ನಾಪತ್ತೆಯಾಗಿರುವ ಇಸ್ಕಾನ್ ಉದ್ಯೋಗಿ ಮುರಳೀಧರ್ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
Click