ಇನ್ಸ್ಟಾಗ್ರಾಮ್‌ ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಹೋದ 10 ವರ್ಷದ ಬಾಲಕಿ..! ತಾಯಿಯ ಮೊಬೈಲ್ ನಲ್ಲಿ ಮಗಳ ಚಾಟಿಂಗ್‌..!

ನ್ಯೂಸ್ ನಾಟೌಟ್ : ಗುಜರಾತ್‌ ನ ಧನ್ಸೂರಾ ಗ್ರಾಮದ 5ನೇ ತರಗತಿ ವಿದ್ಯಾರ್ಥಿನಿ, 10 ವರ್ಷದ ಬಾಲಕಿಯೊಬ್ಬಳು ಅಪ್ರಾಪ್ತ ವಯಸ್ಸಿನ ಬಾಲಕನ ಜತೆ ಓಡಿ ಹೋಗಿರುವ ಘಟನೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. 10 ವರ್ಷದ ಬಾಲಕಿ ಕಳೆದ ಕೆಲ ಸಮಯದಿಂದ ತನ್ನ ತಾಯಿಯ ಮೊಬೈಲ್‌ ನಲ್ಲಿ ಇನ್ಸ್ಟಾಗ್ರಾಮ್‌ ಖಾತೆಯನ್ನು ಬಳಸಿ 16ರ ವರ್ಷದ ಬಾಲಕನ ಜತೆ ಚಾಟಿಂಗ್‌ ಮಾಡಲು ಶುರು ಮಾಡಿದ್ದಾಳೆ. ಇಬ್ಬರ ನಡುವಿನ ಮೆಸೇಜ್‌ ಅತ್ಮೀಯತೆಗೆ ತಿರುಗಿದೆ. ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದು, ಅದರಂತೆ ಡಿಸೆಂಬರ್‌ 31ರಂದು ಬಾಲಕಿ ಮನೆಯಿಂದ ಹೊರಗೆ ಹೋಗಿದ್ದಾಳೆ. ಇತ್ತ ಬಾಲಕಿಯ ಮನೆಯವರು ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ. ತಮ್ಮ ಮಗಳನ್ನು ಕಿಡ್ನ್ಯಾಪ್‌ ಮಾಡಿರಬಹುದೆನ್ನುವ ಸಂಶಯದ ಮೇರೆಗೆ ದೂರು ದಾಖಲಿಸಿದ್ದಾರೆ.ದೂರು ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಇಬ್ಬರು ಅಪ್ರಾಪ್ತರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆ ಬಳಿಕ ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ತಾವಿಬ್ಬರು ಇನ್ಸ್ಟಾಗ್ರಾಮ್‌ ಮೂಲಕ ಪರಿಚಯವಾಗಿದ್ದು, ಇಬ್ಬರು ಪ್ರೀತಿಸುತ್ತಿದ್ದೇವೆ. ತಮ್ಮ ಮೂವರು ಸ್ನೇಹಿತರ ಸಹಾಯ ಪಡೆದು ಓಡಿ ಹೋಗಲು ನಿರ್ಧಾರ ಮಾಡಿದ್ದು, ಅದಕ್ಕಾಗಿ ಮನೆ ಬಿಟ್ಟು ಬಂದಿರುವುದಾಗಿ ಪೊಲೀಸರ ಮುಂದೆ ಇಬ್ಬರು ಅಪ್ರಾಪ್ತರು ಹೇಳಿದ್ದಾರೆ.ಸದ್ಯ ಇಬ್ಬರನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. Click