ನ್ಯೂಸ್ ನಾಟೌಟ್ : ಅಕ್ಷಯ್ ಕುಮಾರ್ ಅಭಿನಯದ ಬಾಲಿವುಡ್ ನ ಬಹುನಿರೀಕ್ಷಿತ ʼಸ್ಕೈ ಫೋರ್ಸ್ʼ (Sky Force) ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
ಭಾರತದ ಮೊದಲ ವೈಮಾನಿಕ ದಾಳಿಯ ಕಥೆಯನ್ನು ʼಸ್ಕೈ ಫೋರ್ಸ್ʼ ಹೇಳಲಿದೆ. ಶತ್ರು ದೇಶ ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ಮಾಡುವ ದೃಶ್ಯವನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.
ಅಂದಿನ ಪಾಕ್ ಅಧ್ಯಕ್ಷ ಮಹಮದ್ ಆಯೂಬ್ ಖಾನ್ ರೇಡಿಯೋ ಪಾಕಿಸ್ತಾನದಲ್ಲಿ ಭಾರತಕ್ಕೆ ಸವಾಲು ಎಸೆಯುವ ಧ್ವನಿಯನ್ನು ಕೇಳಿಸಲಾಗಿದೆ. ಯುದ್ಧದ ಬಗ್ಗೆ ಅಂದು ಅಯೂಬ್ ಖಾನ್ ಮಾತನಾಡಿರುವುದನ್ನು ತೋರಿಸುವ ಮೂಲಕ ಟ್ರೇಲರ್ ಝಲಕ್ ಆರಂಭವಾಗಿದೆ.
ಪಾಕಿಸ್ತಾನದ ಭಾರತೀಯ ಸೇನೆ ವೈಮಾನಿಕ ದಾಳಿಯನ್ನು ಮಾಡುವ ದೃಶ್ಯವನ್ನು ತೋರಿಸುವುದರ ಜತೆಗೆ ದೇಶ ಭಕ್ತಿಯನ್ನು ಉಕ್ಕಿಸುವ ಡೈಲಾಗ್ಸ್ ಗಳು ಗಮನ ಸೆಳೆಯುತ್ತದೆ.
ಟಿ.ಕೆ. ವಿಜಯನ್ (ಟ್ಯಾಬಿ) ಎಂಬ ಏರ್ ಫೋರ್ಸ್ ಟೀಮ್ ಮೆಂಬರ್ ಏರ್ ಸ್ಟ್ರೈಕ್ ವೇಳೆ ನಾಪತ್ತೆಯಾಗಿದ್ದು, ಆತನ ಹುಡುಕಾಟದ ಸುತ್ತವೂ ಕಥೆ ಸಾಗಲಿದೆ ಎನ್ನುವುದನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.
ಅಕ್ಷಯ್ ಕುಮಾರ್ ಜತೆಗೆ ನವನಟ ವೀರ್ ಪಹಾರಿಯಾ ಅವರು ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನವರಿ 24ಕ್ಕೆ ಚಿತ್ರ ರಿಲೀಸ್ ಆಗಲಿದೆ.
Click