ನ್ಯೂಸ್ ನಾಟೌಟ್:ಜೇಸಿಐ ಸುಳ್ಯ ಸಿಟಿ ಘಟಕದ ಪದ ಪ್ರಧಾನ ಸಮಾರಂಭ 2025 ಉಡುಪಿ ಗಾರ್ಡನ್ ಸಭಾಂಗಣದಲ್ಲಿ ಜ.22 ರಂದು ನಡೆಯಿತು ಸಮಾರಂಭದಲ್ಲಿ ಜೆಸಿಐ ಸಿಟಿ ಘಟಕದ ಅಧ್ಯಕ್ಷ ಜೇಸಿ ವಿಷ್ಣು ಪ್ರಕಾಶ್ ನಾರ್ಕೋಡುರವರು ಹೇಮಂತ್ ಸಂಪಾಜೆರಿಗೆ ಅಧಿಕಾರ ಹಸ್ತಾಂತರಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ನೇಹ ವಿದ್ಯಾಸಂಸ್ಥೆ ಸಂಚಾಲಕ ಡಾ. ಚಂದ್ರಶೇಖರ್ ದಾಮ್ಲೆ , ಜೇಸಿಐ ವಲಯ 15ರ ಅಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಶ್ ಬಿ. ಎ. ವಲಯ ಉಪಾಧ್ಯಕ್ಷ ಜೆಎಫ್ಎಂ ರಂಜಿತ್ ಹೆಚ್ .ಡಿ. ವಲಯ ಅಧಿಕಾರಿಗಳಾದ ಜೇಸಿ ಚಂದ್ರಶೇಖರ್ ಕನಕಮಜಲು , ಜೇಸಿ ಯು.ಪಿ ಬಶೀರ್ ಬೆಳ್ಳಾರೆ ನಿಕಟ ಪೂರ್ವ ಅಧ್ಯಕ್ಷ ಜೇಸಿ ರಂಜಿತ್ ಪಿ.ಜೆ ಮತ್ತು ಕಾರ್ಯದರ್ಶಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಐದು ಜನ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಸಮಾರಂಭದಲ್ಲಿ ಘಟಕದ ಸ್ಥಾಪಕ ಮನಮೋಹನ್ ಬಳ್ಳಡ್ಕ ,ಪೂರ್ವಧ್ಯಕ್ಷ ವಿನಯ್ ರಾಜ್ ಮಡ್ತಿಲ , ಸಂಚಾಲಕರು ಮ್ಯಾಟ್ರಿಕ್ಸ್ ಎಜ್ಯುಕೇಶನಲ್ ಇನ್ಸ್ಟಿಟ್ಯೂಟ್ ಸುಳ್ಯ ಮತ್ತು ಜೇಸಿ ಮತ್ತು ಜೆಜೇಸಿ ಸದಸ್ಯರು ಉಪಸ್ಥಿತರಿದ್ದರು.