ನ್ಯೂಸ್ ನಾಟೌಟ್ : ನಾನೊಬ್ಬ ರೈತನ ಮಗ. ಭೂ ಕಬಳಿಕೆ ಆರೋಪ ಸುಳ್ಳು. ಸತ್ಯಾಂಶ ನಿಮಗೆ ಗೊತ್ತಿಲ್ಲ. ಇದರಿಂದ ನನಗೆ ಬಹಳ ನೋವಾಗಿದೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ.
ಇಂದು(ಜ.26) ರಾಮನಗರದಲ್ಲಿ ಮಾತನಾಡಿದ ಶಾಸಕ, 1987 ರಲ್ಲಿ ಭೂ ನ್ಯಾಯಮಂಡಳಿಯಲ್ಲಿ ನಿಯಮದ ಪ್ರಕಾರವೇ ಅವರಿಗೆ ಅರ್ಡರ್ ಆಗಿದೆ. ನಾನು ರೈತರು ಮತ್ತು ಭೂ ಮಾಲೀಕರ ಜೊತೆ ಮಾತನಾಡಿದ್ದೆ. ಕಾನೂನು ಪ್ರಕಾರವಾಗಿ ಅವರಿಗೆ ಫಾರಂ 10 ನೀಡಿಸಿದ್ದೇನೆ. 10 ಇದ್ದವರಿಗೆ ಮತ್ತೆ 10 ಗುಂಟೆ ಸೇರಿಸಿ ಎಲ್ಲರನ್ನೂ ಸಮಾಧಾನ ಮಾಡಿದ್ದೆವು. ರೈತರ ಒಪ್ಪಿಗೆ ಮೇರೆಗೆ ಕಾನೂನು ಪ್ರಕಾರ ಮಾಡಿದ್ದೇವೆ. 19 ಜನ ಗೇಣಿದಾರು ಒಪ್ಪಿಗೆ ಕೊಟ್ಟಿದ್ದಾರೆ. ನಾಲ್ಕೈದು ಜನ ಸಂಘ ಸಂಸ್ಥೆ ಕಟ್ಟಿಕೊಂಡು ರೋಲ್ ಕಾಲ್ ಗಿರಾಕಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡ್ತಾ ಇದ್ದಾರೆ. ಕಾನೂನು ರೀತಿ ನ್ಯಾಯ ದೊರಕಿಸಬೇಕು ಅಂತ ನಾನು ಕೆಲಸ ಮಾಡಿದ್ದೇನೆ. 265 ಸರ್ವೆ ನಂಬರ್ ನಲ್ಲಿ ಊರು ಇದೆ. ಅಲ್ಲಿ ಯಾರಿಗೂ ಹಕ್ಕು ಪತ್ರ ಆಗಿಲ್ಲ. ಹೀಗಾಗಿ ನನ್ನ ಹೆಸರಿಗೆ ಮಾಡಿಸಿ ನಂತರ ಅವ್ರುಗೆ ಹಕ್ಕು ಪತ್ರ ಮಾಡಿಕೊಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಇದನ್ನೇ ಕೆಲ ರೋಲ್ ಕಾಲ್ ಗಿರಾಕಿಗಳು ನನ್ನ ಬಳಿ ದುಡ್ಡಿಗೆ ಬಂದಿದ್ರು. ನಾನು ಇದಕ್ಕೆ ಸೊಪ್ಪು ಹಾಕದ್ದಕ್ಕೆ ಈ ರೀತಿ ಆರೋಪ ಮಾಡ್ತಿದ್ದಾರೆ ಎಂದರು.
ಶಾಸಕ ಇಕ್ಬಾಲ್ ಹುಸೇನ್ ತಾವು ಭೂಕಬಳಿಕೆ ಮಾಡಿಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಕನಕಪುರ ತಾಲೂಕಿನ ಹೊಂಗಣಿದೊಡ್ಡಿ ಗ್ರಾಮಸ್ಥರು ಶಾಸಕರು ಭೂಕಬಳಿಕೆ ಮಾಡಿರುವುದಾಗಿ ದಾಖಲೆ ಬಿಡುಗಡೆ ಮಾಡಿದ್ದಾರೆ. ನಿನ್ನೆ ರಾಮನಗರದಲ್ಲಿ ಸುದ್ದಿಗೋಷ್ಟಿ ನಡೆಸಿ, ಭೂ ಮಾಲೀಕರು, ಗ್ರಾಮಸ್ಥರಿಗೆ ಹಿಂದೆ ಕ್ರಯ ಮಾಡಿಕೊಟ್ಟಿರೋ ದಾಖಲೆ ಬಿಡುಗಡೆಗೊಳಿಸಿದ್ದಾರೆ.
ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಖರೀದಿ ಮಾಡಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇಡೀ ಗ್ರಾಮವೇ ಶಾಸಕರ ಹೆಸರಲ್ಲಿ ಇದೆ ಎಂಬುದನ್ನ ಶಾಸಕರೇ ಒಪ್ಪಿಕೊಂಡಿದ್ದಾರೆ. ಈಗ ಗ್ರಾಮದ ಜಮೀನನ್ನ ಬಿಟ್ಟು ಕೊಡ್ತೀನಿ ಅಂತಾರೆ. ಕೇವಲ ಗ್ರಾಮದ ಜಮೀನು ಮಾತ್ರವಲ್ಲ, ನಮ್ಮ ಕೃಷಿ ಭೂಮಿಯನ್ನೂ ನಮಗೆ ಬಿಟ್ಟುಕೊಡಬೇಕು. ಗೇಣಿದಾರರಿಗೆ ಜಮೀನುಗಳನ್ನ ವಾಪಸ್ ನೀಡಬೇಕು. ಸ್ಥಳಕ್ಕೆ ಡಿಸಿ ಭೇಟಿ ನೀಡಿ ನಮ್ಮ ಜಾಗಕ್ಕೆ ಮಂಜೂರಾತಿ ಪತ್ರಗಳ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Click