- +91 73497 60202
- [email protected]
- January 29, 2025 3:31 AM
ಗೀಸರ್ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿಡಿಯೋ ತೋರಿಸಿ ಮಹಿಳೆಗೆ ಬೆದರಿಕೆ..! ಇಲ್ಲಿದೆ ವಿಡಿಯೋ
ನ್ಯೂಸ್ ನಾಟೌಟ್: ಮನೆಗೆ ಅಳವಡಿಸಿದ್ದ ಗೀಸರ್ ನಲ್ಲಿ ರಹಸ್ಯ ಕ್ಯಾಮೆರಾ ಇರಿಸಿ ಮಹಿಳೆಯ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಸೆಕ್ಸ್ ಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ದುಷ್ಕರ್ಮಿಯನ್ನು ಸಾರ್ವಜನಿಕರೇ ಪತ್ತೆ ಮಾಡಿ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬೆಂಗಳೂರಿನ ಮಹಿಳೆಯೊಬ್ಬರು ಮನೆಯಲ್ಲಿ ಗೀಸರ್ ಕೆಟ್ಟೋಗಿದೆ ಅಂತಾ ಟೆಕ್ನಿಷಿಯನ್ ಕರೆಸಿದ್ದರೆ ಆತ ಗೀಸರ್ ಗೇ ರಹಸ್ಯ ಕ್ಯಾಮೆರಾ ಅಳವಡಿಸಿ ಮಹಿಳೆಯ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಈ ವಿಚಾರದಿಂದ ತೀವ್ರ ನೊಂದಿದ್ದ ಮಹಿಳೆ ಯೂಟ್ಯೂಬರ್ ನೆರವು ಪಡೆದು ಆತನನ್ನು ಪತ್ತೆ ಮಾಡಿ ಸಾರ್ವಜನಿಕವಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸಿಸುತ್ತಿರುವ ಮಹಿಳೆ ಇತ್ತೀಚೆಗೆ ತಮ್ಮ ಮನೆಯ ಗೀಸರ್ ಕೆಟ್ಟು ಹೋಗಿದೆ ಎಂದು ಟೆಕ್ನೀಷಿಯನ್ ಗೆ ಕರೆ ಮಾಡಿದ್ದರು. ಈ ವೇಳೆ ಗೀಸರ್ ರಿಪೇರಿ ಮಾಡುವ ನೆಪದಲ್ಲಿ ಬಂದ ಆತ ಮನೆಗೆ ಬಂದು ಗೀಸರ್ ನಲ್ಲಿ ಯಾರಿಗೂ ತಿಳಿಯದಂತೆ ಹಿಡನ್ ಕ್ಯಾಮೆರಾ ಫಿಕ್ಸ್ ಮಾಡಿದ್ದಾನೆ. ಬಳಿಕ ಮಹಿಳೆಯ ಖಾಸಗಿ ದೃಶ್ಯಗಳನ್ನು ಹಿಡನ್ ಕ್ಯಾಮೆರಾದಲ್ಲಿ ಸೆರೆಹಿಡಿದು ಬಳಿಕ ಮಹಿಳೆಯ ವಾಟ್ಸಪ್ ನಂಬರ್ ಗೆ ಕಳುಹಿಸಿ ಆಕೆಯನ್ನು ಬ್ಲಾಕ್ ಮೇಲ್ ಮಾಡಿದ್ದಾನೆ. ನೀನು ನನ್ನ ಜೊತೆ ಬರಬೇಕು.. ಇಲ್ಲವಾದರೆ ಈ ವಿಡಿಯೋಗಳನ್ನು ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ. View this post on Instagram A post shared by Manjesh Yashas (@_.paagal_mike._) ಆತನ ಬೆದರಿಕೆಗೆ ಹೈರಾಣಾದ ಮಹಿಳೆ ಒಂದಷ್ಟು ದಿನ ಈ ವಿಚಾರವನ್ನು ಮನೆಯವರಿಗೆ ತಿಳಿಸಿಲ್ಲ. ಆದರೆ ಈತನ ಕಾಟ ಜಾಸ್ತಿಯಾದ ಹಿನ್ನಲೆಯಲ್ಲಿ ಯೂಟ್ಯೂಬರ್ ಒಬ್ಬರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಮಹಿಳೆ ನೆರವು ನೀಡುವಂತೆ ಕೇಳಿದ ಮನವಿಗೆ ಸ್ಪಂದಿಸಿದ ಯೂಟ್ಯೂಬರ್ ಮಂಜೇಶ್ ಯಶಸ್ ಮತ್ತು ಅವರ ತಂಡ ದುಷ್ಕರ್ಮಿ ಪತ್ತೆ ಮಾಡಿದ್ದಾರೆ.ಮಂಜೇಶ್ ಮತ್ತು ಅವರ ತಂಡ ಸಂತ್ರಸ್ಥ ಕುಟುಂಬ ಸದ್ಯಸರು ಜೊತೆ ಸೇರಿ ಕಾಮುಕನನ್ನ ಹಿಡಿಯಲು ಪ್ಲಾನ್ ರೂಪಿಸುತ್ತಾರೆ. ಇದಾದ ಬಳಿಕ ಫೋನ್ ನಲ್ಲಿ ಮಹಿಳೆ ಜೊತೆ ಮಾತನಾಡಿದ ಕಾಮುಕ ಮಹಿಳೆಗಾಗಿ ಜನವರಿ 24 ರಂದು ಬಸ್ ನಿಲ್ದಾಣದ ಬಳಿ ಬರಲು ಹೇಳಿದ್ದಾನೆ. ಇದೇ ಸಂದರ್ಭದಲ್ಲಿ ಯುವಕರ ತಂಡ ಆತನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿ ತಿಳಿಸಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ