- +91 73497 60202
- [email protected]
- January 22, 2025 7:16 PM
ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ವ್ಯಕ್ತಿ..! 5 ರಿಂದ 6 ಗಂಟೆಗಳ ಕಾಲ ಬೋನಿನಲ್ಲಿ ಒದ್ದಾಟ..!
ನ್ಯೂಸ್ ನಾಟೌಟ್: ಚಿರತೆ ಸೆರೆಗಾಗಿ ಜಮೀನೊಂದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬರು ಸಿಕ್ಕಿಬಿದ್ದ ವಿಚಿತ್ರ ಘಟನೆ ತಾಲೂಕಿನ ಪಡಗೂರು ಗ್ರಾಮದ ಬಳಿ ನಿನ್ನೆ(ಜ.16) ನಡೆದಿದೆ. ಹನುಮಯ್ಯ ಎಂಬಾತ ಬೋನಿನಲ್ಲಿ ಸೆರೆಯಾಗಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ . ಗ್ರಾಮ ವ್ಯಾಪ್ತಿಯಲ್ಲಿ ಬೀಡು ಬಿಟ್ಟ ಚಿರತೆ ನಿರಂತರವಾಗಿ ದಾಳಿ ಮಾಡಿ ಜಾನುವಾರುಗಳನ್ನು ತಿನ್ನುತ್ತಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಗ್ರಾಮದ ಮಹಾದೇವಸ್ವಾಮಿ ಎಂಬ ರೈತರ ಜಮೀನಿನಲ್ಲಿ ತುಮಕೂರು ಮಾದರಿ ಬೃಹತ್ ಬೋನನ್ನು ಇರಿಸಿ ಬಲಿ ಪ್ರಾಣಿಯಾಗಿ ಕರು ಕಟ್ಟಿದ್ದರು. ಈ ನಡುವೆ ಬೋನಿನ ಬಳಿ ಹೋಗಿದ್ದ ಹನುಮಯ್ಯ ಚಿರತೆ ಬೋನಿನಲ್ಲಿ ಹೇಗೆ ಸೆರೆಯಾಗುತ್ತದೆ ಎಂಬುದನ್ನು ತಿಳಿಯುವ ಕುತೂಹಲದಿಂದ ಒಳ ಹೊಕ್ಕಿದ್ದಾರೆ. ನಂತರ ಬೋನಿನ ಬಾಗಿಲು ಬಿದ್ದಿದೆ. ಬಂದ್ ಆಗಿದ್ದ ಬಾಗಿಲು ತೆರೆಯಲು ಒಳಗೆ ಅವಕಾಶ ಇಲ್ಲವಾದ ಕಾರಣ ಇವರು 5-6 ತಾಸು ಬೋನಿನಲ್ಲೇ ಕಳೆದಿದ್ದರು.ರೈತರೊಬ್ಬರು ಬೋನಿನೊಳಗೆ ವ್ಯಕ್ತಿ ಸೆರೆಯಾಗಿದ್ದನ್ನ ಕಂಡು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ದರು. ನಂತರ ಅರಣ್ಯ ಇಲಾಖೆಯವರು ವ್ಯಕ್ತಿಯನ್ನು ಬೋನಿನಿಂದ ಬಿಡುಗಡೆಗೊಳಿಸಿದ್ದಾರೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ